ದೇಶ

ಶೀಘ್ರದಲ್ಲೇ ಎಲ್ಲಾ ರೈಲುಗಳಲ್ಲಿ ಸಿಸಿಟಿವಿ, ವೈಫೈ: ಪಿಯೂಷ್‌ ಗೋಯಲ್

Lingaraj Badiger
ಲಖನೌ: ಶೀಘ್ರದಲ್ಲೇ ದೇಶದ ಎಲ್ಲಾ ರೈಲುಗಳಲ್ಲಿ ಸಿಸಿಟಿವಿ ಮತ್ತು ವೈಫೈ ಸೌಲಭ್ಯ ಒದಗಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಭಾನುವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೈಲ್ವೆ ಸಚಿವರು, ದೇಶದ ಎಲ್ಲಾ ರೈಲ್ವೇ ನಿಲ್ದಾಣಗಳು ಸ್ವಚ್ಛ, ಸುರಕ್ಷಿತ ಮತ್ತು ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿವೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ನಿರ್ಧರಿಸಿದೆ. ಅಲ್ಲದೆ ಎಲ್ಲಾ ರೈಲುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲು ನಿರ್ಧರಿಸಿದ್ದೇವೆ ಮತ್ತು ವೈಫೈ ಸೌಲಭ್ಯವನ್ನು ಒದಗಿಸುತ್ತೇವೆ ಎಂದು ಗೋಯಲ್ ತಿಳಿಸಿದರು.
ರಾಯಬರೇಲಿ ರೈಲ್ವೆ ಕೋಚ್ ಫ್ಯಾಕ್ಟರಿಯನ್ನು ವಿಶ್ವದ ಅತಿ ದೊಡ್ಡ ರೈಲ್ವೆ ಕೋಚ್ ಫ್ಯಾಕ್ಟರಿಯನ್ನಾಗಿ ಪರಿವರ್ತಿಸಲಾಗುವುದು ಎಂದು ರೈಲ್ವು ಸಚಿವರು ಹೇಳಿದ್ದಾರೆ.
ಎರಡು ದಿನಗಳ ಹಿಂದಷ್ಟೆ ಭಾರತೀಯ ರೈಲ್ವೆ ತೇಜಸ್ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳಲ್ಲಿನ ಎಲ್ಲಾ ಎಲ್ ಸಿಡಿ ಟಿವಿಗಳನ್ನು ತೆರವುಗೊಳಿಸುವದಾಗಿ ಘೋಷಿಸಿತ್ತು. ಈಗ ಹೊಸದಾಗಿ ಸಿಸಿಟಿವಿ ಮತ್ತು ವೈಫೈಸೌಲಭ್ಯ ಒದಗಿಸುವುದಾಗಿ ಹೇಳಿದೆ.
ತೇಜಸ್ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳಲ್ಲಿ ಹೆಡ್ ಫೋನ್ ಗಳು ಕಾಣೆಯಾಗುತ್ತಿರುವ ಮತ್ತು ಪದೇಪದೇ ಎಲ್ ಸಿಡಿ ಟಿವಿ ಹಾನಿಗೊಳಗಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ತೆರವುಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
SCROLL FOR NEXT