ದೇಶ

ಅಚ್ಚೆ ದಿನ್ ಪ್ರಚಾರ ಉಲ್ಟಾ ಹೊಡೆಯುತ್ತದೆ, ಪ್ರಧಾನಿ ನಿರಾಕರಣೆಯಲ್ಲಿರುವುದು ದುರದೃಷ್ಟ: ರಾಹುಲ್ ಗಾಂಧಿ

Sumana Upadhyaya

ನವದೆಹಲಿ: ದೇಶದಲ್ಲಿ ಉತ್ಪಾದನೆ ವಲಯವನ್ನು ಬೆಳೆಸದಿದ್ದರೆ ಸಾಮೂಹಿಕ ನಿರುದ್ಯೋಗವುಂಟಾಗುವ ಸಾಧ್ಯತೆಯಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಪೌಲ್ ಕ್ರುಗ್ಮಾನ್ ನೀಡಿರುವ ಹೇಳಿಕೆಯನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸಿರುವ ರಾಹುಲ್ ಗಾಂಧಿ, ದುರದೃಷ್ಟವಶಾತ್ ನಿರಾಕರಣೆಯಲ್ಲಿ ಬದುಕುತ್ತಿರುವ ಪ್ರಧಾನಿ ನಮಗೆ ಸಿಕ್ಕಿದ್ದಾರೆ ಎಂದು ಜರೆದಿದ್ದಾರೆ.

ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಅಮೆರಿಕಾದ ಆರ್ಥಿಕತಜ್ಞ ನೀಡಿರುವ ಹೇಳಿಕೆ ವಿರೋಧ ಪಕ್ಷಗಳು ಕಳೆದ ಎರಡು ವರ್ಷಗಳಿಂದ ಹೇಳುತ್ತಾ ಬಂದಿರುವುದನ್ನು ಹೇಳಿ ಪ್ರಚಾರ ಮಾಡುತ್ತಿದ್ದಾರಷ್ಟೆ ಎಂದರು.

ಕಳೆದ ಎರಡು ವರ್ಷಗಳಿಂದ ನಾವು ಹೇಳುತ್ತಾ ಬಂದಿರುವುದನ್ನು ನೊಬೆಲ್ ಪಾರಿತೋಷಕ ಆರ್ಥಿಕತಜ್ಞ ಪೌಲ್ ಕ್ರುಗ್ಮನ್ ದೃಢಪಡಿಸಿದ್ದಾರೆ. ಇಂದು ಭಾರತ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಸಾಮೂಹಿಕ ನಿರುದ್ಯೋಗ ಕೂಡ ಒಂದು. ಆದರೆ ಅದನ್ನು ಪ್ರಧಾನಿ ನಿರಾಕರಿಸುತ್ತಲೇ ಬರುತ್ತಿದ್ದಾರೆ. ನಮಗೆ ಇಂತಹ ಪ್ರಧಾನಿಗಳು ಸಿಕ್ಕಿರುವುದು ದುರದೃಷ್ಟಕರ, ಅವರ ಅಚ್ಚೆ ದಿನ್ ಪ್ರಚಾರ ಉಲ್ಟಾ ಹೊಡೆಯುತ್ತಿದೆ ಎಂಬ ಆತಂಕ ಅವರಿಗೆ ಉಂಟಾಗಿದೆ ಎಂದು ಟೀಕಿಸಿದರು.

ಭಾರತದ ಈಗಿನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದ ಅಮೆರಿಕದ ಆರ್ಥಿಕ ತಜ್ಞ ಕ್ರುಗ್ನನ್, ಭಾರತದಲ್ಲಿ ಇಂದು ಅಸಮಾನತೆಯ ಪ್ರಮಾಣ ಹೆಚ್ಚಾಗುತ್ತಿದೆ. ಭಾರತ ಆರ್ಥಿಕ ವಿಚಾರದಲ್ಲಿ ಅಗಾಧ ಹೆಜ್ಜೆಯಿರಿಸಿದೆ. ಆದರೆ ಸಂಪತ್ತುಗಳು ಸರಿಯಾಗಿ ಹಂಚಿಕೆಯಾಗುತ್ತಿಲ್ಲ ಎಂದಿದ್ದರು.

SCROLL FOR NEXT