ದೇಶ

ತೆಹ್ರಿಕ್-ಇ-ಹುರಿಯತ್ ಅಧ್ಯಕ್ಷ ಸ್ಥಾನಕ್ಕೆ ಗಿಲಾನಿ ರಾಜೀನಾಮೆ; ಅಶ್ರಫ್ ಸೆಹ್ರಾಯ್ ನೂತನ ಅಧ್ಯಕ್ಷ

Raghavendra Adiga
ಶ್ರೀನಗರ (ಜಮ್ಮು ಕಾಶ್ಮೀರ), ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ತೆಹರೀಕ್ -ಇ-ಹುರಿಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ
ಹುರಿಯತ್ ನ ಇನ್ನೋರ್ವ ಹಿರಿಯ ನಾಯಕ  ಮುಹಮ್ಮದ್ ಅಶ್ರಫ್ ಸೆಹ್ರಾಯ್ ಅವರು ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. .ಶ್ರೀನಗರದಲ್ಲಿನ ಹುರಿಯತ್ ಪಕ್ಷದ ಕಛೇರಿಯಲ್ಲಿ ನಡೆಅ ಸಭೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಕಾಶ್ಮೀರ ಪ್ರತ್ಯೇಕತಾವಾದಿಗಳ ಪ್ರಮುಖ ನಾಯಕರಾಗಿರುವ ಗಿಲಾನಿ ಪ್ರತ್ಯೇಕ ಕಾಶ್ಮೀರವನ್ನು ಬೆಂಬಲಿಸುವ ಪ್ರಮುಖ ಮುಖಂಡರೆಂದು ಗುರುತಿಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಾಶ್ಮೀರದಲ್ಲಿ ನಡೆಯುತ್ತಿರುವ ದೀರ್ಘ ಕಾಲದ ಉಗ್ರಗಾಮಿ ಚಟುವಟಿಕೆ ಹಾಗೂ ರಕ್ತಪಾತಕ್ಕೆ ಗಿಲಾನಿಯವರೇ ಕಾರಣ ಎಂದು ದೂರಿದ್ದಾರೆ. ಇದೇ ವೇಳೆ ಒಮರ್ ಅವರ ತಂದೆ, ಮಾಜಿ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ಸಹ ಆಗಬಹುದಾದ "ಮತ್ತಷ್ಟು ವಿನಾಶದಿಂದ ಕಾಶ್ಮೀರಿ ಜನರನ್ನು ಉಳಿಸುವತ್ತ" ಗಿಲಾನಿ ಗಮನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಗಿಲಾನಿ ಅವರು ಜಮ್ಮು ಮತ್ತು ಕಾಶ್ಮೀರದ ಸೋಪರ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಮೂರು ಬಾರಿ  (1972, 1977 ಮತ್ತು 1987)  ಶಾಸಕರಾಗಿ ಆಯ್ಕೆಯಾಗಿದ್ದರು. 
SCROLL FOR NEXT