ದೇಶ

ನ್ಯಾಷನಲ್ ಹೆರಾಲ್ಡ್ ಕೇಸು: ಯಂಗ್ ಇಂಡಿಯಾಗೆ 10 ಕೋಟಿ ರೂ. ಠೇವಣಿ ಇಡಲು ಆದೇಶ

Sumana Upadhyaya

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಪ್ರಮುಖ ಷೇರುದಾರರಾಗಿರುವ ಯಂಗ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಗೆ 249.15 ಕೋಟಿ ರೂಪಾಯಿ ಆದಾಯ ತೆರಿಗೆ ವಹಿವಾಟಿನಲ್ಲಿ 10ಕೋಟಿ ರೂಪಾಯಿ ಠೇವಣಿಯಿಡುವಂತೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಎ.ಕೆ.ಚಾವ್ಲಾ ಅವರನ್ನೊಳಗೊಂಡ ನ್ಯಾಯಪೀಠ, ಇದಕ್ಕೂ ಮುನ್ನ ನ್ಯಾಷನಲ್ ಹೆರಾಲ್ಡ್  ಅಕ್ರಮ ಆಸ್ತಿ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಸಮ್ಮನ್ಸ್ ಜಾರಿ ಮಾಡಿತ್ತು. ಇದೀಗ 10 ಕೋಟಿ ರೂಪಾಯಿಗಳಲ್ಲಿ  5ಕೋಟಿ ರೂಪಾಯಿಗಳನ್ನು ಈ ತಿಂಗಳ 31ರೊಳಗೆ ಮತ್ತು ಉಳಿದ ಹಣವನ್ನು ಏಪ್ರಿಲ್ 15ರೊಳಗೆ ಠೇವಣಿಯಿಡುವಂತೆ ಹೇಳಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂದಿನ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ. 

SCROLL FOR NEXT