ಅಲಿಘಡ್(ಉತ್ತರಪ್ರದೇಶ): ವಿಶ್ವವಿಖ್ಯಾತ ತಾಜ್ ಮಹಲ್, ಮೆಕ್ಕಾ ಮತ್ತಿತರ ಮೊಘಲ್ ಯುಗದ ಸ್ಮಾರಕಗಳನ್ನು ಹಿಂದೂ ದೇವಾಲಯಗಳೆಂದು ಅಲಿಘಡ್ ಹಿಂದು ಮಹಾಸಭಾ ಉಲ್ಲೇಖಿಸುವ ಮೂಲಕ ವಿವಾದ ಸೃಷ್ಟಿಸಿದೆ.
ಹಿಂದೂ ಮಹಾಸಭಾ ತನ್ನ ಹೊಸ ವರ್ಷದ ಕ್ಯಾಲೆಂಡರ್ ನಲ್ಲಿ ತಾಜ್ ಮಹಲ್ ಅನ್ನು ತೇಜೋ ಮಹಾಲಯ ದೇವಸ್ಥಾನ, ಮೆಕ್ಕಾವನ್ನು ಮಕೇಶ್ವರ ಮಹಾದೇವ ದೇಗುಲ, ಮಧ್ಯಪ್ರದೇಶದಲ್ಲಿರುವ ಕಮಲ್ ಮೌಲಾ ಮಸೀದಿಯನ್ನು ಭೋಜಶಾಲಾ ಮತ್ತು ಕಾಶಿಯಲ್ಲಿರುವ ಜ್ಞಾನವಿಪಿ ಮಸೀದಿಯನ್ನು ವಿಶ್ವನಾಥ ದೇವಾಲಯ, ಕುತುಬ್ ಮಿನಾರ್ ಅನ್ನು ವಿಷ್ಣುಸ್ತಂಭ, ಜಾನ್ ಪುರದ ಅತಾಲಾವನ್ನು ಅತ್ಲಾದೇವಿ ದೇಗುಲ ಮತ್ತು ಅಯೋಧ್ಯಾವನ್ನು ರಾಮಜನ್ಮಭೂಮಿ ಎಂದು ಉಲ್ಲೇಖ ಮಾಡಿದೆ.
ಈ ಕುರಿತು ಮಾತನಾಡಿರುವ ಹಿಂದು ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಅವರು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಉದ್ದೇಶ. ಸರ್ಕಾರವೂ ಈ ನಿರ್ಧಾರವನ್ನು ಒಪ್ಪಿಕೊಳ್ಳುವ ಭರವಸೆ ಇದೆ ಎಂದು ಹೇಳಿದರು.
ಹಿಂದೂ ಮಹಾಸಭಾದ ಮಾಡಿರುವ ಉಲ್ಲೇಖ ಕುರಿತು ಪ್ರತಿಕ್ರಿಯಿಸಿರುವ ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್(ಎಐಎಂಪಿಎಲ್ಬಿ)ನ ಇಮಾಮ್ ಇ ಈದ್ಗಾ ಮೌಲಾನಾ ಖಲೀದ್ ರಶೀದ್ ಫಿರಂಗಿ ಮಹ್ಲಿ, ಹಿಂದೂ ಮಹಾಸಭಾ ಈ ಹೇಳಿಕೆ ಆಧಾರ ರಹಿತ, ಪವಿತ್ರ ಮೆಕ್ಕಾವನ್ನು ಹಿಂದು ದೇಗುಲ ಎನ್ನುತ್ತಿರುವುದು ಜಾತ್ಯಾತೀತಗೆ ವಿರುದ್ಧ ಎಂದಿದ್ದಾರೆ.