ದೇಶ

ಮಾಜಿ ಡಿಜಿಪಿ ಸಾಂಗ್ಲಿಯಾನಾ ವಿರುದ್ಧ ನಿರ್ಭಯಾ ತಾಯಿ ತೀವ್ರ ಕಿಡಿ

Manjula VN
ಬೆಂಗಳೂರು: 2012 ದೆಹಲಿ ಸಾಮೂಹಿಕಿ ಅತ್ಯಾಚಾರ ಬಲಿಪಶು ನಿರ್ಭಯಾ ತಾಯಿ ಅಶಾ ದೇವಿಯವರು ಬಹಿರಂಗ ಪತ್ರವೊಂದರಲ್ಲಿ ಮಾಜಿ ಡಿಜಿಪಿ ಸಾಂಗ್ಲಿಯಾನಾ ವಿರುದ್ದ ತೀವ್ರವಾಗಿ ಕಿಡಿಕಾರಿದ್ದಾರೆ. 
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಾ.9 ರಂದು ಸಾಂಗ್ಲಿಯಾನಾ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. 
ನಿರ್ಭಯಾಳ ತಾಯಿಗೆ ಉತ್ತಮ ಅಂಗ ಸೌಷ್ಟವ ಇದೆ. ಹಾಗಿರುವಾಗ ನಿರ್ಭಯಾ ಎಷ್ಟು ಸುಂದರಿಯಾಗಿದ್ದಳು ಎನ್ನುವುದನ್ನು ನಾನು ಊಹಿಸಲಾರೆ. ಕಾಮಾಂಧ ಪುರುಷರು ದುರ್ಬಲ ಮಹಿಳೆಯರ ಮೇಲೆ ಎರಗಿದಾಗ, ತಮ್ಮನ್ನು ಅವರು ಕೊಲ್ಲುವುದನ್ನು ತಡೆಯಲು ಅವರಿಗೆ ಶರಣಾಗುವುದೇ ಉತ್ತಮ. ಅನಂತರದಲ್ಲಿ ಪ್ರಕರಣ ಇತ್ಯಾದಿ ಕಾನೂನು ಕ್ರಮ ನಡೆಸಬಹುದು ಎಂದು ಹೇಳಿದ್ದರು. 
ಸಾಂಗ್ಲಿಯಾನಾ ಅವರ ಈ ಹೇಳಿಕೆಗೆ ವ್ಯಾಪಕ ಖಂಡನೆ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು. ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಸಾಂಗ್ಲಿಯಾನಾ ಅವರು ನನ್ನ ಹೇಳಿಕೆಯಲ್ಲಿ ವಿವಾದದ ವಿಷಯವೇ ಇಲ್ಲ. ನಾನು ಮಹಿಳೆಯರ ರಕ್ಷಣೆ ಹಾಗೂ ಸುರಕ್ಷೆ ಭದ್ರತೆಗೆ ಮಹತ್ವಕ್ಕೆ ಒತ್ತು ನೀಡಿ ಮಾತನಾಡಿದ್ದೆ. ಮಹಿಳೆಯರಿಗೆ ಎಲ್ಲಾ ಕಾಲಕಕ್ಕೂ ರಕ್ಷಣೆ ನೀಡಬೇಕೆಂದು ಹೇಳಿದ್ದೆ ಎಂದಿದ್ದರು. 
ಸಾಂಗ್ಲಿಯಾನ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ನಿರ್ಭಯಾ ತಾಯಿ ಬಹಿರಂಗ ಪತ್ರವೊಂದನ್ನು ಬರೆದಿದ್ದು, ಆ ಪತ್ರ ಹಿಂದಿ ದೈನಂದಿನ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿದೆ. 
ಸಾಂಗ್ಲಿಯಾನಾ ಅವರ ಸಲಹೆ ಹಾಗೂ ಹೇಳಿಕೆ ಮಗಳ ಸಾವಿನ ಬಳಿಕ ಹೆಣ್ಣುಮಕ್ಕಳಿಗಾಗಿ ನಾನು ಮಾಡುತ್ತಿರುವ ಹೋರಾಟಕ್ಕೆ ಅವಮಾನ ಮಾಡಿದಂತಾಗಿದೆ. ಸಾಂಗ್ಲಿಯಾನಾ ನಮ್ಮ ಸಮಾಜದ ಹಿಂಜರಿಕೆಯ ಮನೋಭಾವವನ್ನು ತೋರಿಸಿದ್ದಾರೆ. ಅವರ ಚಿಂತನೆಯನ್ನು ನಿರ್ಭಯ ಅತ್ಯಾಚಾರಿಗಳಿಗೆ ಹೋಲಿಕೆ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಅಲ್ಲದೆ, ತಮ್ಮ ಹೇಳಿಕೆಯನ್ನು ಗಡಿಯಲ್ಲಿರುವ ಸೇನಾ ಸಿಬ್ಬಂದಿಗಳಿಗಳೂ ಅನ್ವಯಿಸುವಿರೇ ಎಂದು ಪ್ರಶ್ನಿಸಿರುವ ಅವರು, ಶತ್ರುಗಳು ದಾಳಿ ಮಾಡಲು ಬಂದಾಗ ಸೇನಾಪಡೆಗಳು ಶರಣಾಗಬೇಕೆ ಎಂದು ಕೇಳಿದ್ದಾರೆ. 
SCROLL FOR NEXT