ನವದೆಹಲಿ: ಇರಾಕ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ಹತ್ಯೆಯಾಗಿರುವ 39 ಭಾರತೀಯರ ಕುಟುಂಬ ಸದಸ್ಯರನ್ನು ಕೇಂದ್ರ ಸರ್ಕಾರ 7 ಬಾರಿ ದಾರಿ ತಪ್ಪಿಸಿದೆ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಹೃದಯ ಶೂನ್ಯತೆಯ ಎಲ್ಲಾ ಮಿತಿಯನ್ನೂ ಮೀರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವರ್ತನೆ ಮಾಡಿದೆ. 39 ಭಾರತೀಯರು ಮೃತಪಟ್ಟಿದ್ದಾರೆ ಎಂದು ಇಡೀ ವಿಶ್ವವೇ ಹೇಳುತ್ತಿದ್ದರೂ ಸಹ ಕೇಂದ್ರ ಸರ್ಕಾರ ಅಲ್ಲಗಳೆಯುತ್ತಿತ್ತು. ಮೃತಪಟ್ಟ ಭಾರತೀಯರ ಕುಟುಂಬ ಸದಸ್ಯರನ್ನು 7 ಬಾರಿ ಕೇಂದ್ರ ಸರ್ಕಾರ ದಾರಿ ತಪ್ಪಿಸಿತ್ತು ಎಂದು ಸುರ್ಜೆವಾಲ ಆರೋಪಿಸಿದ್ದಾರೆ.
ಸುಷ್ಮಾ ಸ್ವರಾಜ್ ಸಹ ಈ ವಿಷಯದಲ್ಲಿ ರಾಜಕೀಯ ಮಾಡಿದ್ದು ದುರದೃಷ್ಟಕರ, 39 ಭಾರತೀಯರ ಬಗ್ಗೆ ಹುತಾತ್ಮರ ಪ್ರತಿಷ್ಠಾನ ಪತ್ರಿಕಾಗೋಷ್ಠಿ ನಡೆಸುವುದಾಗಿ ತಿಳಿಸಿತ್ತು, ಈ ಹಿನ್ನೆಲೆಯಲ್ಲಿ ಹೆದರಿದ ಕೇಂದ್ರ ಸರ್ಕಾರ 39 ಭಾರತೀಯರನ್ನು ಇಸೀಸ್ ಉಗ್ರರು ಹತ್ಯೆ ಮಾಡಿರುವುದನ್ನ್ನು ಬಹಿರಂಗಪಡಿಸಿದ್ದಾರೆ ಎಂದು ಸುರ್ಜೆವಾಲ ಹೇಳಿದ್ದಾರೆ. c