ದೇಶ

ಪ್ರತಿಭಟನೆ ನಡುವೆಯೂ ಮಧುರೈ ತಲುಪಿದ ರಾಮ ರಾಜ್ಯ ರಥ ಯಾತ್ರೆ'

Shilpa D
ಚೆನ್ನೈ: ಭಾರಿ ಪ್ರತಿಭಟನೆಯ ನಡುವೆಯೂ ವಿಶ್ವಹಿಂದು ಪರಿಷದ್‌ನ 'ರಾಮ ರಾಜ್ಯ ರಥ ಯಾತ್ರೆ' ಬುಧವಾರ ತಮಿಳುನಾಡಿನ ಮಧುರೈ ತಲುಪಿದೆ. 
ಮಂಗಳವಾರ ತಿರುನಲ್‌ವೇಲಿಯಲ್ಲಿ ಪ್ರತಿಭಟನೆಗೆ ಮುಂದಾಗದ ಹಲವು ಸಂಘಟನೆಗಳು ಮತ್ತು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿತ್ತು. 
ರಥ ಯಾತ್ರೆಗೆ ಅವಕಾಶ ನೀಡಿದ್ದಕ್ಕಾಗಿ ವಿಪಕ್ಷ ಡಿಎಂಕೆ ಆಡಳಿತೂರೂಢ ಎಐಡಿಎಂಕೆ ವಿರುದ್ಧ ಕಿಡಿ ಕಾರಿದೆ. ವಿಪಕ್ಷ ನಾಯಕ ಸ್ಟಾಲಿನ್‌ 'ಯಾತ್ರೆಯಿಂದ ರಾಜ್ಯದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಲಿದೆ, ಕಾನೂನು ಮತ್ತು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಎಐಎಡಿಎಂಕೆ ಸರ್ಕಾರ ಇದೆಯೋ ಬಿಜೆಪಿ ಸರ್ಕಾರ ಇದೆಯೊ ತಿಳಿಯುತ್ತಿಲ್ಲ'ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಫೆಬ್ರವರಿಯಲ್ಲಿ ಅಯೋಧ್ಯೆಯಿಂದ ಹೊರಟಿರುವ 39 ದಿನಗಳ ರಾಮ ರಾಜ್ಯ ರಥ ಯಾತ್ರೆ ಮಾರ್ಚ್‌ 25ರಂದು ರಾಮೇಶ್ವರದಲ್ಲಿ ಸಮಾಪ್ತಿಯಾಗಲಿದೆ. ಯಾತ್ರೆ ತೆರಳುವ ಮಾರ್ಗದುದ್ದಕ್ಕೂ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. 
ಮಾರ್ಚ್ 25 ರಂದು ಆರಂಭವಾದ ರಾಮ ರಾಜ್ಯ ರಥ ಯಾತ್ರೆ ರಾಮೇಶ್ವರಂ ನಲ್ಲಿ ಕೊನೆಗೊಳ್ಳಲಿದೆ, ಇದುವರೆಗೂ ಸುಮಾರು 6 ಸಾವಿರ ಕಿಮೀ ರಥಯಾತ್ರೆ ಮುಗಿದಿದ್ದು, ಅಯೋದ್ಯೆಯಲ್ಲಿ ರಾಮ ಮಂದಿರ ಕಟ್ಟಬೇಕೆಂಬುದು ರಥಯಾತ್ರೆಯ ಪ್ರಮುಖ ಬೇಡಿಕೆಯಾಗಿದೆ.
SCROLL FOR NEXT