ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಹಿಮಾಚಲ ಪ್ರದೇಶ ಮಾಜಿ ಸಿಎಂ ವೀರಭದ್ರ ಸಿಂಗ್ ಗೆ ಜಾಮೀನು

Srinivas Rao BV
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಗೆ ದೆಹಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 
ದೆಹಲಿಯ ಪಟಿಯಾಲ ಕೋರ್ಟ್, 50,000 ರೂಪಯಿ ಬಾಂಡ್,  ಅಷ್ಟೇ ಮೊತ್ತದ ಶ್ಯೂರಿಟಿ ನೀಡುವಂತೆ ಕೋರ್ಟ್ ವೀರಭದ್ರ ಸಿಂಗ್ ಹಾಗೂ ಅವರ ಪತ್ನಿ ಪ್ರತಿಭಾ ಸಿಂಗ್ ಗೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಏ.25 ಕ್ಕೆ ನಿಗದಿಪಡಿಸಿದೆ.   ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಪ್ರಕಾರ ಜಾರಿ ನಿರ್ದೇಶನಾಲಯ ವೀರಭದ್ರ ಸಿಂಗ್ ಹಾಗೂ ಅವರ ಪತ್ನಿ ವಿರುದ್ಧ ಫೆಬ್ರವರಿ ತಿಂಗಳಲ್ಲಿ ಪ್ರಕರಣ ದಾಖಲಿಸಿತ್ತು. 
ಅಕ್ರಮ ಆಸ್ತಿ ಸಂಪಾದನೆ ಹಾಗೂ 7 ಕೋಟಿಯಷ್ಟು ಆದಾಯವನ್ನು ಕೃಷಿಯಿಂದ ಬಂದದ್ದು ಎಂದು ವೀರಭದ್ರ ಸಿಂಗ್ ತಮ್ಮ ಹಾಗೂ ತಮ್ಮ ಪತ್ನಿಯ ಆದಾಯದ ಮೂಲಕ್ಕೆ ಸಮರ್ಥನೆ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಭದ್ರ ಸಿಂಗ್ ಹಾಗೂ ಅವರ ಯೂನಿವರ್ಸಲ್ ಆಪಲ್ ಅಸೋಸಿಯೇಟೆಡ್ ಮಾಲೀಕರಾದ ಚುನ್ನಿ ಲಾಲ್ ಚೌಹಾಣ್, ಎಲ್ಐಸಿ ಏಜೆಂಟ್ ಆನಂದ್ ಚೌಹಾಣ್ ಮತ್ತು ಇಬ್ಬರು ಸಹ-ಆರೋಪಿಗಳು ಪ್ರೇಮ್ ರಾಜ್ ಮತ್ತು ಲಾವನ್ ಕುಮಾರ್ ರೋಚ್ ವಿರುದ್ಧ ಪ್ರಕರಣ ದಾಖಲಾಗಿತ್ತು. 
ಇದರ ಜೊತೆಗೆ ಸಿಬಿಐ ಸಹ ವೀರಭದ್ರ ಸಿಂಗ್ ವಿರುದ್ಧ 10 ಕೋಟಿ ರೂಪಾಯಿಯಷ್ಟು ಅಕ್ರಮ ಅಸ್ತಿ ಸಂಪಾದನೆ ಮಾಡಿರುವ ಆರೋಪ ಹೊರಿಸಿತ್ತು. 
SCROLL FOR NEXT