ದೇಶ

ಹುತಾತ್ಮರ ದಿನ: ಪ್ರಧಾನಿಯಿಂದ ಭಗತ್ ಸಿಂಗ್, ಸುಖದೇವ್, ರಾಜ್ ಗುರು ಬಲಿದಾನದ ನೆನೆಕೆ

Raghavendra Adiga
ನವದೆಹಲಿ: ಇಂದು (ಮಾ.23) ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್, ಶಿವರಾಮ್ ರಾಜ್‌ಗುರು ಮತ್ತು ಸುಖ್‌ದೇವ್ ಥಾಪರ್  ಅವರನ್ನು ಅಂದಿನ ಬ್ರಿಟೀಷ್ ಆಡಳಿತ ಗಲ್ಲಿಗೇರಿಸಿದ ದಿನ. ದೇಶಕ್ಕೆ ಸ್ವಾತಂತ್ರ ಸಿಗಬೇಕೆನ್ನುವ ಕಾರಣಕ್ಕೆ ತಮ್ಮ ಜೀವವನ್ನು ಬಲಿ ನೀಡಿದ ಈ ವೀರರನ್ನು ನಾಡಿನ ಸಮಸ್ತ ಜನತೆ ನೆನೆಯುತ್ತಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿ ಹಲವು ಗಣ್ಯರು ವೀರ ಸೇನಾನಿಗಳಿಗೆ ಗೌರವ ಸಲ್ಲಿಸಿದ್ದಾರೆ.
"ಅವರು ತಮ್ಮ ಜೀವನ ತ್ಯಾಗ ಮಾಡಿದರು. ಇದರಿಂದಾಗಿ ಇತರರು ಸ್ವಾತಂತ್ರ್ಯ ಮತ್ತು ಘನತೆಯ ಜೀವನವನ್ನು ನಡೆಸುವುದು ಸಾಧ್ಯವಾಗಿದೆ" ಎಂದು ಮೋದಿ ಹೇಳಿದ್ದಾರೆ.
SCROLL FOR NEXT