ಸಂಗ್ರಹ ಚಿತ್ರ 
ದೇಶ

ರಾಜ್ಯಸಭೆ ಚುನಾವಣೆ: ಉತ್ತರ ಪ್ರದೇಶದಲ್ಲಿ ಅಡ್ಡಮತದಾನ, ಬಿಎಸ್ ಪಿ ಶಾಸಕನಿಂದ ಬಿಜೆಪಿಗೆ ಮತ

ಹಾಲಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಬಿಎಸ್ ಪಿ ಶಾಸಕರೊಬ್ಬರು ಅಡ್ಡ ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಲಖನೌ: ಹಾಲಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಬಿಎಸ್ ಪಿ ಶಾಸಕರೊಬ್ಬರು ಅಡ್ಡ ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಾಧ್ಯಮಗಳ ವರದಿಗಳ ಅನ್ವಯ ಬಹುಜನ ಸಮಾಜವಾದಿ ಪಕ್ಷದ ಶಾಸಕ ಅನಿಲ್ ಸಿಂಗ್ ಎಂಬುವವರು ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಬ್ಯಾಲೆಟ್ ಪೇಪರ್ ನಲ್ಲಿ ಬಿಜೆಪಿ ಗುರುತಿಗೆ ಟಿಕ್ ಮಾಡುವ ಮೂಲಕ ಆ ಮತ ಪತ್ರವನ್ನು ಏಜೆಂಟ್ ಗಳಿಗೆ ತೋರಿಸಿ ಮತದಾನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಪ್ರಸ್ತುತ ನಾನು ಮಾತ್ರ ಬಿಜೆಪಿ ಮತ ನೀಡಿದ್ದು, ಇತರರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ವರೆಗೂ ಸುಮಾರು 17 ಶಾಸಕರು ಮತದಾನ ಮಾಡಿದ್ದು, ಮಾಯಾವತಿ ನೇತೃತ್ವದ ಬಿಎಸ್ ಪಿ 19 ಶಾಸಕರನ್ನು ಹೊಂದಿದ್ದುಸಮಾಜವಾದಿ ಪಕ್ಷದ ಬೆಂಬಲ ನಿರೀಕ್ಷೆ ಮಾಡುತ್ತಿದೆ. ಇನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಹು ಸಂಖ್ಯಾಗಣವನ್ನು ಹೊಂದಿರುವ ಬಿಜೆಪಿ ಕೂಡ ತನ್ನ ಅಭ್ಯರ್ಥಿ ಬೆಂಬಲಿಲು ನಿರ್ಧರಿಸಿದ್ದು, ರಾಜ್ಯಸಭೆ ಚುನಾವಣೆ ಗೆಲ್ಲುವ ಮೂಲಕ ಈ ಹಿಂದಿನ ಉಪ ಚುನಾವಣೆ ಸೋಲನ್ನು ಮರೆ ಮಾಚುವ  ಪ್ರಯತ್ನ ಮಾಡಿದೆ.
ಏತನ್ಮಧ್ಯೆ ಪಕ್ಷೇತರ ಶಾಸಕ ಅಮ್ಮಲ್ ಮಣಿ ಅವರು ಕೂಡ ಬಿಜೆಪಿಗೆ ಮತನೀಡಿದ್ದು, ಸಿಎಂ ಯೋಗಿ ಆದಿತ್ಯಾ ನಾಥ್ ಅವರು ಆಶ್ವಾಸವೆಯಂತೆ ಬಿಜೆಪಿ ಮತ ನೀಡಿದ್ದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ