ಬಿಜೆಪಿ ನಮಗೆ ಹಾವು-ಇಲಿ ಹೋರಾಟದ ಗೆಲುವಿನ ಮಂತ್ರ ಹೇಳಿಕೊಟ್ಟಿದೆ: ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್
ಉತ್ತರ ಪ್ರದೇಶದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಎಸ್ ಪಿ-ಎಸ್ ಪಿ ಮೈತ್ರಿಗೆ ಜೆಪಿಯನ್ನು ಮಣಿಸಲು ಸಾಧ್ಯವಾಗಿದ್ದು, 2019 ರ ಲೋಕಸಭಾ ಚುನಾವಣೆಗೆ ತಯಾರಿ ಪ್ರಾರಂಭವಾದಂತಿದೆ.
ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಎಸ್ ಪಿ-ಎಸ್ ಪಿ ಮೈತ್ರಿಗೆ ಜೆಪಿಯನ್ನು ಮಣಿಸಲು ಸಾಧ್ಯವಾಗಿದ್ದು, 2019 ರ ಲೋಕಸಭಾ ಚುನಾವಣೆಗೆ ತಯಾರಿ ಪ್ರಾರಂಭವಾದಂತಿದೆ.
ಉಪಚುನಾವಣೆಗಳ ಗೆಲುವಿನ ಬಗ್ಗೆ ಸಂಡೇ ಸ್ಟಾಂಡರ್ಡ್ ಜೊತೆ ಉತ್ತರ ಪ್ರದೇಶ ಮಾಜಿ ಸಿಎಂ, ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮಾತನಾಡಿದ್ದು, ಚುನಾವಣೆಯ ಹೋರಾಟವನ್ನು ಹಾವು-ಇಲಿ ಹೋರಾಟಕ್ಕೆ ಹೋಲಿಕೆ ಮಾಡಿ ಬಿಜೆಪಿ ನೀಡಿದ್ದ ಹೇಳಿಕೆಯನ್ನು ಬಿಜೆಪಿಗೇ ತಿರುಗಿಸಿದ್ದಾರೆ.
ಈ ವಿಧಾನಸಭಾ ಉಪಚುನಾವಣೆಯ ಗೆಲು ಈ ವರೆಗೂ ವಿರೋಧ ಪಕ್ಷಗಳಿಗೆ ಸಂಬಂಧಿಸಿದಂತೆ ಇದ್ದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವಂತೆ ಮಾಡಿದ್ದು ಪ್ರತಿಪಕ್ಷಗಳ ನರೇಟೀವ್ ಗೂ ಉತ್ತರ ನೀಡುವಂತೆ ಮಾಡಿದೆ ನಮ್ಮ ಹಾಗೂ ಅವರ ನಡುವಿನ ಹೋರಾಟವನ್ನು ಹಾವು-ಇಲಿಯ ನಡುವಿನ ಹೋರಾಟ ಎಂದು ಕರೆಯುವ ಮೂಲಕ ಅವರೇ ನಮಗೆ ಗೆಲುವಿನ ಮಂತ್ರವನ್ನು ನೀಡಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ವಿಧಾನಸಭಾ ಉಪಚುನಾವಣೆಯ ಗೆಲುವು ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು, ಬಿಜೆಪಿಯನ್ನು ಸೋಲಿಸಬಹುದೆಂಬ ಆತ್ಮವಿಶ್ವಾಸ ಬಂದಿದೆ. ಈ ಎರಡೂ ಗೆಲುವಿನಿಂದ ನಮ್ಮ ಪಕ್ಷಕ್ಕೆ ನೈತಿಕ ಉತ್ತೇಜನ ಸಿಕ್ಕಿದಂತಾಗಿದೆ ಎಂದು ಅಖಿಲೇಶ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಬಿಎಸ್ ಪಿ ಜೊತೆಗಿನ ಮೈತ್ರಿಯನ್ನು ಮುಂದುವರೆಸುವುದಾಗಿ ಹೇಳಿರುವ ಅಖಿಲೇಶ್ ಯಾದವ್, ಮುಂದಿನ ದಿನಗಳಲ್ಲಿ ಒಗ್ಗೂಡಿ ಕಾರ್ಯತಂತ್ರ ರೂಪಿಸುವುದಾಗಿ ಹೇಳಿದ್ದಾರೆ.