ನವದೆಹಲಿ: ಭದ್ರತೆಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಕ್ಕೆ ಪ್ರಯಾಣಿಸುವ ಅಧಿಕೃತ ವಿಮಾನದ ವಿವರವನ್ನು ಆರ್ ಟಿಐ ಅಡಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ಪ್ರಧಾನಿ ಮೋದಿ ವಿದೇಶಕ್ಕೆ ಪ್ರಯಾಣಿಸುವ ವಿಮಾನ ವಿವರ ಕೋರಿ ಲೋಕೇಶ್ ಬಟ್ರ ಅವರು ಸಲ್ಲಿಸಿದ್ದ ಆರ್ ಟಿಐ ಅರ್ಜಿಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ಪ್ರಧಾನಿ ಕಚೇರಿಯ ನಿರ್ದೇಶನದಂತೆ, ಭದ್ರತೆಯ ದೃಷ್ಟಿಯಿಂದ ಆರ್ ಟಿಐ ಕಾಯ್ದೆಯಡಿ ಪ್ರಧಾನಿ ಪ್ರಯಾಣಿಸುವ ವಿಮಾನದ ವಿವರ ನೀಡಲು ಬರುವುದಿಲ್ಲ ಎಂದು ಉತ್ತರಿಸಿದೆ.
ನವೆಂಬರ್ 2016ರಿಂದ ಇದುವರೆಗೆ ಪ್ರಧಾನಿ ಮೋದಿ ಅವರು ಪ್ರಯಾಣಿಸಿದ ವಿಮಾನ ವಿವರ, ನಾಗರಿಕ ವಿಮಾನ ಸಚಿವಾಲಯಕ್ಕೆ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿದ ಬಿಲ್ ಗಳ ವಿವರ ನೀಡುವಂತೆ ಕೋರಿ ಬಟ್ರಾ ಅವರು ಫೆಬ್ರವರಿ 2,2018ರಂದು ಆರ್ ಟಿಐ ಅರ್ಜಿ ಸಲ್ಲಿಸಿದ್ದರು.