ಕೋಲ್ಕತ್ತಾ: ದೇಶಾದ್ಯಂತ ರಾಮನವಮಿ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷ ರಾಮನವಮಿ ಮೆರವಣಿಗೆಯನ್ನು ಕೈಗೊಂಡಿವೆ.
ರಾಮನವಮಿ ಮೆರವಣಿ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳನ್ನು ಒಗ್ಗೂಡಿಸುವುದಕ್ಕೆ ಮೊದಲ ಹೆಜ್ಜೆ ಎಂದು ಬಿಜೆಪಿ ಹೇಳಿದೆ. ಬಿಜೆಪಿ ಮೆರವಣಿಗೆಗೆ ಪರ್ಯಾಯವಾಗಿ ತೃಣಮೂಲ ಕಾಂಗ್ರೆಸ್ ಸಹ ಮೆರವಣಿಗೆ ಹಮ್ಮಿಕೊಂಡಿದ್ದು, ರಾಮನವಮಿ ಆಚರಣೆಯ ಮೂಲಕ ರಾಜ್ಯದ ಜನತೆಯನ್ನು ಒಡೆಯುವುದಕ್ಕೆ ಅವಕಾಶವನ್ನಾಗಿ ಮಾಡಿಕೊಳ್ಳುವುದಕಕ್ಕೆ ಬಿಡುವುದಿಲ್ಲ ಎಂದು ಹೇಳಿದೆ.
ಇದೇ ವೇಳೆ ಕೋಲ್ಕತ್ತಾದಲ್ಲಿ ರಾಮನವಮಿ ಅಂಗವಾಗಿ ಸಂಘಪರಿವಾರವೂ ಸಹ ಮೆರವಣಿಗೆಗಳನ್ನು ಹಮ್ಮಿಕೊಂಡಿದೆ.