ಅಪಘಾತ ಮಾಡಿದ ಕಾರಿಗೆ ಬೆಂಕಿ ಇಟ್ಟ ಗ್ರಾಮಸ್ಥರು 
ದೇಶ

ಬಿಹಾರ: ಭೀಕರ ಅಪಘಾತದಲ್ಲಿ ಇಬ್ಬರು ಪತ್ರಕರ್ತರ ಸಾವು, ಇದು ಕೊಲೆ ಎಂದ ಕುಟುಂಬಸ್ಥರು!

ಸ್ಥಳೀಯ ರಾಜಕೀಯ ಪ್ರಭಾವಿ ಮುಖಂಡನ ಎಸ್ ಯುವಿ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಪತ್ರಕರ್ತರು ಸಾವನ್ನಪ್ಪಿರುವ ಘಟನೆ ಬಿಹಾರದ ಬೋಜ್ ಪುರದಲ್ಲಿ ನಡೆದಿದೆ.

ಭೋಜ್ ಪುರ: ಸ್ಥಳೀಯ ರಾಜಕೀಯ ಪ್ರಭಾವಿ ಮುಖಂಡನ ಎಸ್ ಯುವಿ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಪತ್ರಕರ್ತರು ಸಾವನ್ನಪ್ಪಿರುವ ಘಟನೆ ಬಿಹಾರದ ಬೋಜ್ ಪುರದಲ್ಲಿ ನಡೆದಿದೆ.
ಮೃತ ಪತ್ರಪರ್ತರನ್ನು ನವೀನ್ ನಿಶ್ಚಲ್ ಮತ್ತು ವಿಜಯ್ ಸಿಂಗ್ ಎಂದು ಗುರುತಿಸಲಾಗಿದ್ದು, ಈ ಪೈಕಿ ನವೀನ್ ನಿಶ್ಚಲ್ ಎಂಬಾತ ಹಿಂದೂ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು ಎಂದು ತಿಳಿದುಬಂದಿದೆ.
ಇನ್ನು ಇದು ಅಪಘಾತವಲ್ಲ. ಸ್ಥಳೀಯ ಪ್ರಭಾವಿ ಮುಖಂಡ ತನ್ನ ಬೆಂಬಲಿಗರ ಮೂಲಕ ಮಾಡಿಸಿರುವ ಕೊಲೆಯಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಅಂತೆಯೇ ಬಿಹಾರದಲ್ಲಿ ಈ ಸಂಬಂಧ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿದ್ದು, ಅಪಘಾತಕ್ಕೆ ಕಾರಣವಾದ ಎಸ್ ಯುವಿ ಕಾರನ್ನು ಆಕ್ರೋಶ ಭರಿತ ಸಾರ್ವಜನಿಕರು ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ. ಅಲ್ಲದೆ ಬೋಜ್ ಪುರದಲ್ಲಿರುವ ರಾಜಕೀಯ ಮುಖಂಡನ ಮನೆಗೂ ಬೆಂಕಿ ಇಟ್ಟಿದ್ದಾರೆ.  ಈ ಸಂಬಂಧ ನವೀನ್ ನಿಶ್ಚಲ್ ಸಹೋದರ ರಾಜೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
ರಾಜೇಶ್ ನೀಡಿರುವ ದೂರಿನಲ್ಲಿರುವಂತೆ ತನ್ನ ಸಹೋದರನ ಸಾವಿಗೆ ಸ್ಥಳೀಯ ಪಂಚಾಯತ್ ಮುಖ್ಯಸ್ಥ ಅಹ್ಮದ್ ಅಲಿ ಅಲಿಯಾಸ್ ಹರ್ಸು ಮತ್ತು ಆತನ ಪುತ್ರ ದಬ್ಲೂ ಅವರೇ ಕಾರಣ ಎಂದು ಆರೋಪಿಸಲಾಗಿದ್ದು, ಅಪಘಾತ ಮಾಡಿದ ಎಸ್ ಯುವಿ ಇದೇ ಹರ್ಸುಗೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ. 
ಪ್ರಸ್ತುತ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಬೋಜ್ ಪುರ ಜಿಲ್ಲಾ ಎಸ್ ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

Dimple Queen: ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! Video ವೈರಲ್

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

CNG ರೀಫಿಲ್ ವೇಳೆ ಭೀಕರ ಸ್ಫೋಟ; NH-48ರಲ್ಲಿ ಭಯಾನಕ ಘಟನೆ, ಬದುಕಿದ್ದೇ ಅಚ್ಚರಿ! Video