ದೇಶ

ಭಾರತದಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ವ್ಯಾಪಕ ಕೆಲಸ: ಸಂಸ್ಥೆಯ ಮಾಜಿ ನೌಕರನ ಹೇಳಿಕೆಯಲ್ಲಿ ಕಾಂಗ್ರೆಸ್ ಹೆಸರು!

Srinivas Rao BV
ನವದೆಹಲಿ: ಕೇಂಬ್ರಿಡ್ಸ್ ಅನಾಲಿಕ ಸಂಸ್ಥೆ ಭಾರತದ ಚುನಾವಣೆಗಳಲ್ಲಿ ಕೆಲಸ ಮಾಡಿರುವ ಬಗ್ಗೆ ಸಂಸ್ಥೆಯ ಮಾಜಿ ನೌಕರ ಕ್ರಿಸ್ಟೋಫರ್ ವೈಲೀ ಹೇಳಿಕೆ ನೀಡಿದ್ದು, ತಮ್ಮ ಹೇಳಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಹೆಸರನ್ನು ಉಲ್ಲೇಖಿಸಿದ್ದಾರೆ. 
ಕ್ರಿಸ್ಟೋಫರ್ ವೈಲೀ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯನ್ನು ಆಧುನಿಕ ವಸಾಹತುಗಾರರಿಗೆ ಹೋಲಿಕೆ ಮಾಡಿದ್ದು, ಕಾನೂನು ಸಮ್ಮತವೋ ಅಲ್ಲವೋ ಒಟ್ಟಾರೆ ತಾವು ಅಂದುಕೊಂಡಿರುವ ಕೆಲಸವನ್ನು ಪೂರ್ಣಗೊಳಿಸದೇ ಬಿಡುವುದಿಲ್ಲ ಎಂದು ಹೇಳಿದ್ದಾರೆ. 
ಕೇಂಬ್ರಿಡ್ಜ್ ಅನಾಲಿಟಿಕಾದ ಸಹಾಯ ಪಡೆದವರಲ್ಲಿ ಭಾರತದ ಕಾಂಗ್ರೆಸ್ ಕೂಡ ಇರಬಹುದು ಎಂದು ಕ್ರಿಸ್ಟೋಫರ್ ಹೇಳಿದ್ದಾರೆ. " ನನ್ನ ನಂಬಿಕೆಯ ಪ್ರಕಾರ ಕಾಂಗ್ರೆಸ್ ಪಕ್ಷ ಸಹ ಅವರ ಕ್ಲೈಂಟ್ ಆಗಿದ್ದು, ಕಾಂಗ್ರೆಸ್ ಗಾಗಿ ಕೇಂಬ್ರಿಡ್ಜ್ ಅನಾಲಿಟಿಕ ನಿರ್ವಹಿಸಿದ್ದ ರಾಷ್ಟ್ರೀಯ ಯೋಜನೆಗಳ ಬಗ್ಗೆ ನನಗೆ ತಿಳಿದಿಲ್ಲ, ಆದರೆ ಪ್ರಾದೇಶಿಕ ಮಟ್ಟದಲ್ಲಿ ಯೋಜನೆಗಳನ್ನು ನಿರ್ವಹಿಸಿವೆ, ಭಾರತ ಅತಿ ದೊಡ್ಡ ರಾಷ್ಟ್ರವಾಗಿದ್ದು, ಅಲ್ಲಿನ ಒಂದೊಂದು ರಾಜ್ಯಗಳೇ ಬ್ರಿಟನ್ ದೇಶದಷ್ಟು ದೊಡ್ದದಿವೆ, ಕೇಂಬ್ರಿಡ್ಜ್ ಅನಾಲಿಟಿಕಾ ಕಚೇರಿಗಳು ಅಲ್ಲಿದ್ದು, ಸಿಬ್ಬಂದಿಗಳೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು  ಕ್ರಿಸ್ಟೋಫರ್ ವೈಲೀ  ಹೇಳಿದ್ದಾರೆ. 
SCROLL FOR NEXT