ನವದೆಹಲಿ: ಪ್ಯಾನ್ ಕಾರ್ಡ್- ಆಧಾರ್ ಜೋಡಣೆಗೆ ವಿಧಿಸಲಾಗಿದ್ದ ಗಡುವನ್ನು ಜೂ.30 ವರೆಗೆ ವಿಸ್ತರಣೆ ಮಾಡಲಾಗಿದೆ.
ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಗಡುವನ್ನು ವಿಸ್ತರಿಸಿದ್ದು, ಈಗಿರುವ ಮಾ.31 ರ ಗಡುವನ್ನು ಜೂ.30 ವರೆಗೆ ವಿಸ್ತರಿಸಲಾಗಿದೆ. ಸುಪ್ರೀಂ ಕೋರ್ಟ್ ನ ನಿರ್ದೇಶನದ ಬೆನ್ನಲ್ಲೇ ಆಧಾರ್-ಪ್ಯಾನ್ ಕಾರ್ಡ್ ಜೋಡಣೆಗೆ ವಿಧಿಸಲಾಗಿದ್ದ ಗಡುವನ್ನು ಜೂ.30 ಕ್ಕೆ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ಆದೇಶದಲ್ಲಿ ತಿಳಿಸಲಾಗಿದೆ.
ಆಧಾರ್ ಕಾರ್ಡ್-ಪ್ಯಾನ್ ಕಾರ್ಡ್ ಜೋಡಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳು ಇತ್ಯರ್ಥವಾಗುವವರೆಗೂ ಗಡುವನ್ನು ವಿಸ್ತರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ನಾಲ್ಕನೇ ಬಾರಿಗೆ ಗಡುವನ್ನು ವಿಸ್ತರಿಸಲಾಗಿದೆ.