ವಿಮಾನ ನಿಲ್ದಾಣಗಳಲ್ಲಿ ಪತಂಜಲಿ ಉತ್ಪನ್ನಗಳ ಮಳಿಗೆ ಶೀಘ್ರ ಪ್ರಾರಂಭ 
ದೇಶ

ವಿಮಾನ ನಿಲ್ದಾಣಗಳಲ್ಲಿ ಪತಂಜಲಿ ಉತ್ಪನ್ನಗಳ ಮಳಿಗೆ ಶೀಘ್ರ ಪ್ರಾರಂಭ

ದೇಶಾದ್ಯಂತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಪತಂಜಲಿ ಉತ್ಪನ್ನಗಳ ಮಾರಾಟ ಮಳಿಗೆ ಪ್ರಾರಂಭವಾಗಲಿದೆ.

ನವದೆಹಲಿ: ದೇಶಾದ್ಯಂತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಪತಂಜಲಿ ಉತ್ಪನ್ನಗಳ ಮಾರಾಟ ಮಳಿಗೆ ಪ್ರಾರಂಭವಾಗಲಿದೆ. ದಂತ ಹಾಗೂ ಬಾಯಿ ಆರೋಗ್ಯ ರಕ್ಷಣಾ ಸಂಸ್ಥೆ ಜೆಹೆಚ್ಎಸ್ ಸ್ವೆನ್ಗಾರ್ಡ್ ಲ್ಯಾಬೋರೇಟರೀಸ್ ಲಿಮಿಟೆಡ್,ಪತಂಜಲಿ ಆಯುರ್ವೇದ ಸಂಸ್ಥೆಯೊಡನೆ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣಗಳಲ್ಲಿ ಮಳಿಗೆಗೆಳನ್ನು ತೆರೆಯಲು ಒಪ್ಪಂದ ಮಾಡಿಕೊಂಡಿದೆ.
ವಿಮಾನ ನಿಲ್ದಾಣಗಳಲ್ಲಿ ಪತಂಜಲಿ ಉತ್ಪನ್ನಗಳ ಮಳಿಗೆ ಸ್ಥಾಪನೆಯಿಂದ ಅಂತರಾಷ್ಟ್ರೀಯ ಗ್ರಾಹಕರಿಗೆ ಭಾರತೀಯ ಆಯುರ್ವೇದ ಉತ್ಪನ್ನಗಳು ಸುಲಭವಾಗಿ ದೊರೆಯುವಂತಾಗಲಿದೆ.
ಈ ಮಳಿಗೆಗಳ ಮುಖೇನ ಪತಂಜಲಿಯು ವಿಮಾನ ನಿಲ್ದಾಣದ ಗ್ರಾಹಕರನ್ನು ಹೆಚ್ಚಾಗಿ ತನ್ನತ್ತ ಆಕರ್ಷಿಸಲಿದೆ ಎಂದು ಜೆಹೆಚ್ಎಸ್ ಸ್ವೆನ್ಗಾರ್ಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಿಖಿಲ್ ನಂದ ಹೇಳಿದರು. ಮುಂದಿನ ಎರಡು ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಲಭ್ಯತೆಯ ಆಧಾರದ ಮೇಲೆ ಒಟ್ಟು  100 ಮಳಿಗೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿರುವುದಾಗಿ ಅವರು ಹೇಳಿದರು.
ಪ್ರಸ್ತುತ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಿ2 ಟರ್ಮಿನಲ್ ನಲ್ಲಿ ಮೊದಲ ಪತಂಜಲಿ ಉತ್ಪನ್ನಗಳ ಮಳಿಗೆಯನ್ನು ಪ್ರಾರಂಭಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾದಿಂದ ಕಚ್ಚಾ ತೈಲ ಆಮದು: ಭಾರತ ಸೇರಿ ಇತರ ದೇಶಗಳ ಮೇಲೆ ಶೇ.100ರಷ್ಟು ಸುಂಕ ಮಸೂದೆಗೆ ಅಮೆರಿಕ ಸಂಸತ್ತಿನಲ್ಲಿ ಮುನ್ನಡೆ

ಟೆಲಿಪ್ರಾಂಪ್ಟರ್ ಇಲ್ಲದೇ ಬಿಜೆಪಿ ನಾಯಕರು ವಂದೇ ಮಾತರಂ ಪೂರ್ಣ ಹಾಡಿದರೆ ರಾಜೀನಾಮೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು

ಪಾಕಿಸ್ತಾನದಿಂದ ಮತ್ತೊಂದು ಅಪಾಯ: ದೇಶಾದ್ಯಂತ ಅಲರ್ಟ್ ಘೋಷಿಸಿದ ಭಾರತ!

₹2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ! ಅಕ್ಟೋಬರ್ 15 ರಿಂದ ಜಾರಿ

India vs Afghanistan: ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; ಅಫ್ಘಾನ್ ವಿರುದ್ಧದ T20 ಸರಣಿ ಭಾರತ ಕೈವಶ!