ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರ ಮೃತದೇಹ ಕರ್ನಾಟಕಕ್ಕೆ ಆಗಮನ, ಸ್ವಗ್ರಾಮಗಳಲ್ಲಿ ಅಂತ್ಯಕ್ರಿಯೆ

ದುರಂತದಲ್ಲಿ ಮೃತಪಟ್ಟವರನ್ನು ಹಾಸನದ ಉದ್ಯಮಿ ಪ್ರತಾಪ್, ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸ್ ಇನ್‌ಸ್ಪೆಕ್ಟರ್ ಅರುಣ್ ಸಾಲುಂಕೆ, ವಕೀಲರಾದ ಶಂಕರಗೌಡ ಮತ್ತು ಕೆ. ಸುಧೀರ್ ಹಾಗೂ ಕೋಳಿ ಉದ್ಯಮಿ..
Mortal remains of five killed in Uttarakhand chopper crash reach native places in Karnataka
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದ ಕರ್ನಾಟಕದ ಅಧಿಕಾರಿಗಳು
Updated on: 

ಬೆಂಗಳೂರು: ಉತ್ತರಾಖಂಡದ ಜೋಶಿಮಠ ಸಮೀಪ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಕರ್ನಾಟಕದ ಐವರ ಮೃತದೇಹಗಳನ್ನು ರಾಜ್ಯಕ್ಕೆ ತರಲಾಗಿದ್ದು, ಅವರವರ ಸ್ವಗ್ರಾಮಗಳಿಗೆ ತಲುಪಿಸಲಾಗಿದೆ.

ಸೋಮವಾರ ಕುಟುಂಬಸ್ಥರು ಹಾಗೂ ಬಂಧುಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುರಂತದಲ್ಲಿ ಮೃತಪಟ್ಟವರನ್ನು ಹಾಸನದ ಉದ್ಯಮಿ ಪ್ರತಾಪ್, ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸ್ ಇನ್‌ಸ್ಪೆಕ್ಟರ್ ಅರುಣ್ ಸಾಲುಂಕೆ, ವಕೀಲರಾದ ಶಂಕರಗೌಡ ಮತ್ತು ಕೆ. ಸುಧೀರ್ ಹಾಗೂ ಕೋಳಿ ಉದ್ಯಮಿ ಎಚ್.ಎಸ್. ನಟರಾಜ್ ಎಂದು ಗುರುತಿಸಲಾಗಿದೆ.

ಭಾನುವಾರ ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಐವರ ಮೃತದೇಹಗಳು ತಲುಪಿದ್ದವು. ಬಳಿಕ ಅಲ್ಲಿಂದ ಪ್ರತ್ಯೇಕ ವಾಹನಗಳ ಮೂಲಕ ಅವರವರ ಸ್ವಗ್ರಾಮಗಳಿಗೆ ಕೊಂಡೊಯ್ಯಲಾಯಿತು. ಹೆಲಿಕಾಪ್ಟರ್‌ನ ಪೈಲಟ್ ಕ್ಯಾಪ್ಟನ್ ಹಿಮಾಂಶು ಕೂಡ ಈ ದುರಂತದಲ್ಲಿ ಮೃತಪಟ್ಟಿದ್ದರು.

Mortal remains of five killed in Uttarakhand chopper crash reach native places in Karnataka
ನ್ಯಾಯಾಧೀಶನಾಗಬೇಕೆಂಬ ಕನಸು ಹೊತ್ತಿದ್ದ ದಾವಣಗೆರೆ ವಕೀಲ ಉತ್ತರಾಖಂಡ್ ಹೆಲಿಕಾಪ್ಟರ್ ದುರಂತದಲ್ಲಿ ಸಾವು!

ಸ್ವಗ್ರಾಮದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಅಂತ್ಯಕ್ರಿಯೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮಕ್ಕೆ ಪೊಲೀಸ್ ಇನ್‌ಸ್ಪೆಕ್ಟರ್ ಅರುಣ್ ಸಾಲುಂಕೆ ಅವರ ಮೃತದೇಹ ತಲುಪಿದೆ. ಸೋಮವಾರ ಸ್ವಗ್ರಾಮದಲ್ಲೇ ಅವರ ಅಂತ್ಯಕ್ರಿಯೆ ನೆರವೇರಲಿದೆ. ಬೆಂಗಳೂರಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಅವರು, ಕರ್ತವ್ಯದಲ್ಲಿದ್ದಾಗಲೇ ದುರಂತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಹಾಸನದ ಉದ್ಯಮಿ ಪ್ರತಾಪ್ ಅವರ ಮೃತದೇಹ ಸ್ವಗ್ರಾಮಕ್ಕೆ ತಲುಪಿದೆ. ದಾವಣಗೆರೆ ಜಿಲ್ಲೆಯ ತ್ಯಾವಣಿಗೆ ಗ್ರಾಮಕ್ಕೆ ವಕೀಲ ಕೆ. ಸುಧೀರ್ ಅವರ ಮೃತದೇಹವನ್ನು ಕೊಂಡೊಯ್ಯಲಾಗಿದ್ದು, ಅಲ್ಲಿ ಅಂತ್ಯಕ್ರಿಯೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ವಕೀಲ ಶಂಕರಗೌಡ ಮತ್ತು ಉದ್ಯಮಿ ಎಚ್.ಎಸ್. ನಟರಾಜ್ ಅವರ ಮೃತದೇಹಗಳನ್ನು ತುಮಕೂರು ಜಿಲ್ಲೆಯ ಹುಳಿಯಾರು ದುರ್ಗ ಪಟ್ಟಣಕ್ಕೆ ಕೊಂಡೊಯ್ಯಲಾಗಿದೆ.

ಬದರಿನಾಥದಿಂದ ವಾಪಸಾಗುವಾಗ ದುರಂತ

ಕಳೆದ ಶುಕ್ರವಾರ ಉತ್ತರಾಖಂಡದ ಜೋಶಿಮಠ ಸಮೀಪದ ಚಾಯ್ ಗ್ರಾಮದ ಬಳಿಯ ಬೆಟ್ಟದ ಇಳಿಜಾರಿನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಬದರಿನಾಥ ದೇಗುಲದ ದರ್ಶನ ಮುಗಿಸಿ ಡೆಹ್ರಾಡೂನ್‌ಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಘಟನೆಯಲ್ಲಿ ಪೈಲಟ್ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದರು.

Mortal remains of five killed in Uttarakhand chopper crash reach native places in Karnataka
ಉತ್ತರಾಖಂಡ ಹೆಲಿಕಾಪ್ಟರ್ ದುರಂತ: Yellow alert ನಡುವೆಯೂ ಟೇಕಾಫ್; ನಿರ್ಲಕ್ಷ್ಯಕ್ಕೆ ಆರು ಜೀವಗಳು ಬಲಿ..!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X