ಸುಷ್ಮಾ ಸ್ವರಾಜ್ 
ದೇಶ

ವಿರೋಧ ಪಕ್ಷ ಕಾಂಗ್ರೆಸ್ ಟ್ವೀಟ್ ನ್ನು ರೀಟ್ವೀಟ್​ ಮಾಡಿದ ಸುಷ್ಮಾ ಸ್ವರಾಜ್​!

ತಮ್ಮ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಪಕ್ಷ ಹಾಇರುವ ಟ್ವೀಟ್ ಒಂದನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರೀಟ್ವೀಟ್​ ಮಾಡಿದ್ದಾರೆ!

ನವದೆಹಲಿ: ತಮ್ಮ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಪಕ್ಷ ಹಾಕಿದ್ದ ಟ್ವೀಟ್ ಒಂದನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರೀಟ್ವೀಟ್​ ಮಾಡಿದ್ದಾರೆ!
ಇರಾಕ್ ನಲ್ಲಿ ಇಸಿಸ್ ಉಗ್ರರಿಂದ 39 ಭಾರತೀಯರು ಮೃತಪಟ್ಟ ಘಟನೆಯ ಸಂಬಂಧ ಕಾಂಗ್ರೆಸ್ ಪಕ್ಷ ಈ ಟ್ವೀಟ್ ಮಾಡಿತ್ತು. ಇರಾಕ್ ನಲ್ಲಿ ಭಾರತೀಯರು ಮೃತಪಟ್ಟ ಸಂಬಂಧ ವಿದೇಶಾಂಗ ಸಚಿವರಾಗಿ ಸುಷ್ಮಾ ಸ್ವರಾಜ್​ ಅವರ ದೊಡ್ಡ ಸೋಲು ಇದಾಗಿದೆಯೆ? ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಶ್ನೆ ಮಾಡಿತ್ತು. ಈ ಟ್ವೀಟ್ ನ್ನು ಸುಷ್ಮಾ ಸ್ವರಾಜ್ ರೀಟ್ವಿಟ್ ಮಾಡಿದ್ದಾರೆ.
ಕಾಂಗ್ರೆಸ್ ತನ್ನ ಟ್ವೀಟ್ ಮೂಲಕ ಜನರ ಅಭಿಪ್ರಾಯ ಕೇಳಲು ಮುಂದಾಗಿದ್ದು ಸುಮಾರು 34 ಸಾವಿರ ಜನರು ಇದಕ್ಕೆ ಪ್ರತಿಕ್ರಯಿಸಿದ್ದಾರೆ.ಅದರಲ್ಲಿ 76% ಜನರು ಇಲ್ಲ ಎಂದೆನ್ನುವ ಮೂಲಕ ಸುಷ್ಮಾ ಅವರಿಗೆ ಬೆಂಬಲ ಸೂಚಿಸಿದ್ದಾರೆ. 24% ಜನರು ಮಾತ್ರವೇ ಸುಷ್ಮಾ ಸ್ವರಾಜ್ ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ಸೋತಿದ್ದಾರೆಂದು ಒಪ್ಪಿಕೊಂಡಿದ್ದಾರೆ. 
ವಿದೇಶಾಂಗ ಸಚಿವೆ ವಿರುದ್ಧವೇ ಟ್ವಿಟ್ಟರ್ ಮೂಲಕ ಜನಾಭಿಪ್ರಾಯ ಸಂಗ್ರಹಕ್ಕೆ ಹೊರಟ ಕಾಂಗ್ರೆಸ್ ಗೆ ಇದರಿಂದ ಭಾರೀ ಮುಜುಗರ ಉಂತಾಗಿದೆ.
ಇರಾಕ್ ನಲ್ಲಿ ಇಸೀಸ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ  39 ಭಾರತೀಯರು ಮೃತಪಟ್ಟಿದ್ದಾರೆ ಎಂದು ಸುಷ್ಮಾ ಸ್ವರಾಜ್​ ಕಳೆದ ವಾರ ಸಂಸತ್ತಿನಲ್ಲಿ ಪ್ರಕಟಿಸಿದ್ದರು. ಈ ಸಂಬಂಧ ಕಾಂಗ್ರೆಸ್ ವಿದೇಶಾಂಗ ಸಚಿವರ ವಿರುದ್ಧ ಟೀಕೆ ಮಾಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ನಮ್ಮ ಆಚರಣೆಯ ನಡುವೆ ಬೇರೆಯದನ್ನು ಯಾಕೆ ತರುತ್ತೀರಾ: ದಸರಾದಲ್ಲಿ ಕಂಬಳ ಆಯೋಜನೆಗೆ ಯದುವೀರ್- ಪ್ರತಾಪ್ ಸಿಂಹ ವಿರೋಧ!

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್