ಸ್ಪೋಟಕ 
ದೇಶ

ಹಾಸನದಿಂದ ಕೋಝಿಕೋಡ್ ಗೆ ಸಾಗಿಸುತ್ತಿದ್ದ 3 ಸಾವಿರ ಕೆಜಿ ಸ್ಫೋಟಕ ಕೇರಳದಲ್ಲಿ ವಶಕ್ಕೆ

ಕರ್ನಾಟಕದ ಹಾಸನದಿಂದ ಕೇರಳದ ಕೋಝಿಕೋಡ್ ಕಡೆಗೆ ಹೋಗುತ್ತಿದ್ದ ಲಾರಿಯೊಂದನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು , ಗೆಲಾಟಿನ್ ಕಡ್ಡಿ, ಪ್ಯೂಸ್ ವೈರ್ ಸೇರಿದಂತೆ ಸುಮಾರು 3 ಸಾವಿರ ಕೆ ಜಿ ತೂಕದ ಭಾರೀ ಪ್ರಮಾಣದ ಸ್ಪೋಟಕಗಳನ್ನು ಇಂದು ಮುಂಜಾನೆ ವಶಪಡಿಸಿಕೊಂಡಿದ್ದಾರೆ.

ಕೋಝಿಕೋಡ್ : ಕರ್ನಾಟಕದ ಹಾಸನದಿಂದ ಕೇರಳದ ಕೋಝಿಕೋಡ್ ಕಡೆಗೆ ಹೋಗುತ್ತಿದ್ದ   ಲಾರಿಯೊಂದನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು , ಗೆಲಾಟಿನ್ ಕಡ್ಡಿ, ಪ್ಯೂಸ್ ವೈರ್  ಸೇರಿದಂತೆ ಸುಮಾರು 3 ಸಾವಿರ ಕೆ ಜಿ ತೂಕದ  ಭಾರೀ ಪ್ರಮಾಣದ ಸ್ಪೋಟಕಗಳನ್ನು ಇಂದು ಮುಂಜಾನೆ  ವಶಪಡಿಸಿಕೊಂಡಿದ್ದಾರೆ.

ಈ  ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇಬೆಶ್ ಕುಮಾರ್ ಬೆಹೆರಾ ಅವರ ಸೂಚನೆ ಮೇರೆಗೆ ಕೇರಳದ ಮಲ್ಲಾಪುರಂ ಜಿಲ್ಲೆಯ  ಮೊಂಗಮ್ ಬಳಿ ಕರ್ನಾಟಕ ನೋಂದಣಿಯ ಲಾರಿಯನ್ನು ಪೊಲೀಸರು ಶೋಧಿಸಿದಾಗ  ಭಾರೀ ಪ್ರಮಾಣದ ಸ್ಪೋಟಕಗಳು ಪತ್ತೆಯಾಗಿವೆ.

ಶೋಧ ವೇಳೆ 10 ಸಾವಿರ ಡಿಟೋನೇಟರ್, 3 ಸಾವಿರದ 750 ಕಿಲೋಗ್ರಾಮ್ ಗಿಲಾಟಿನ್ ಕಡ್ಡಿಗಳು  ಹಾಗೂ 213 ಪ್ಯೂಸ್ ವೈರ್  ಗಳನ್ನು ಪಟ್ಟಣಗಳಲ್ಲಿ ಇಟ್ಟಿರುವುದು ಕಂಡುಬಂದಿದೆ.

 ಈ ಲಾರಿ  ಕರ್ನಾಟಕದ  ಹಾಸನದಿಂದ ಕೋಝಿಕೊಡು  ಕಡೆಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸರಿಯಾದ ದಾಖಲೆ ಹಾಜರುಪಡಿಸದ ಹಿನ್ನೆಲೆಯಲ್ಲಿ ಸ್ಪೋಟಕ ನಿಯಂತ್ರಣ ಕಾಯ್ದೆಯಡಿ ಇಬ್ಬರು ಲಾರಿ ಚಾಲಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಬಂಧಿತರನ್ನು  ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ