ಆಗ್ರಾ: ಭಾರತೀಯ ಪುರಾತತ್ವ ಇಲಾಖೆ ತಾಜ್ ಮಹಲ್ ಪ್ರವೇಶವನ್ನು 3 ಗಂಟೆಗಳಿಗೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಭಾನುವಾರದಿಂದ ಹೊಸ ವೇಳಾಪಟ್ಟಿ ನಿಗದಿಯಾಗಲಿದ್ದು, ಜನಸಮೂಹ ಹೆಚ್ಚು ಭೇಟಿ ನೀಡುತ್ತಿರುವುದರಿಂದ ತಾಜ್ ಮಹಲ್ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿರುವುದರಿಂದ ಈ ರೀತಿಯ ಆದೇಶ ಹೊರಡಿಸಲಾಗಿದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ.
ಜನಸಮೂಹವನ್ನು ನಿಯಂತ್ರಿಸುವುದು ಅಲ್ಲಿನ ಸಿಬ್ಬಂದಿಗಳಿಗೆ ಸವಾಲಿನ ಸಂಗತಿಯಾಗಿದ್ದು, ವಾರಾಂತ್ಯದ ದಿನಗಳು ಹಾಗೂ ರಜೆಯ ದಿನಗಳಲ್ಲಿ ತಾಜ್ ಮಹಲ್ ಗೆ ಭೇಟಿ ನೀಡುವ ಜನರ ಸಂಖ್ಯೆ 50,000 ವನ್ನೂ ಮೀರುತ್ತದೆ ಎಂದು ತಿಳಿದುಬಂದಿದೆ.