ದೇಶ

ಉತ್ತರ ಪ್ರದೇಶ: ಕರ್ಣಾಟಕ ಬ್ಯಾಂಕಿನ ನಕಲಿ ಶಾಖೆ ತೆರೆದು ವಂಚನೆ, ಆರೋಪಿ ಬಂಧನ

Raghavendra Adiga
ಬಲಿಯಾ(ಉತ್ತರ ಪ್ರದೇಶ): ಹೆಸರಾಂತ ಬ್ಯಾಂಕ್ ಒಂದರ ನಕಲಿ ಶಾಖೆ ನಡೆಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶ ಬಲಿಯಾ ಜಿಲ್ಲೆ, ಫೆಫ್ನಾ ಪ್ರದೇಶದ ಮುಲಾಯಂ ನಗರದಲ್ಲಿ ನಡೆದಿದೆ.
ಬಂಧಿತ ಆರೋಪಿಯಿಂದ ನಕಲಿ ಪೇಪರ್ ಗಳು, ಮೂರು ಕಂಪ್ಯೂಟರ್, ಲಾಪ್ ಟಾಪ್, 184 ಪಾಸ್ ಬುಕ್ ಗಳು, ಹಾಗೂ ಸ್ಥಳೀಯ ನಾಗರಿಕರಿಟ್ಟಿದ್ದ ಮತ್ತು 1.37 ಲಕ್ಷ ನಗದು ಠೇವಣಿ  ಹಣವನ್ನು ವಶಕ್ಕೆ ಪಡೆದುಕೊಂಡದ್ದಾಗಿ ಪೋಲೀಸರು ಹೇಳಿದ್ದಾರೆ.  ಕಳೆದ ಒಂದು ತಿಂಗಳಿನಿಂದ ಈ ನಕಲಿ ಶಾಖೆ ಕಾರ್ಯಾಚರಣೆ  ನಡೆಸುತ್ತಿದೆ ಎಂದು ಅವರು ಹೇಳಿದರು.
ಮುಲಾಯಂ ನಗರದದಲ್ಲಿ ಕರ್ಣಾಟಕ  ಬ್ಯಾಂಕ್  ನ ನಕಲಿ ಶಾಖೆ ತೆರೆದಿದ್ದ ಅಫಕ್ ಅಹಮದ್ ಎನ್ನುವವನನ್ನು ಬಂಧಿಸಲಾಗಿದೆ. ಈ ಬ್ಯಾಂಕ್ ಶಾಖೆಯ ಮ್ಯಾನೇಜರ್ ಎನ್ನುವುದಾಗಿ ಮುಂಬೈಯ ವಿಖರಾಲಿ  ಈಸ್ಟ್ ನ ನಿವಾಸಿ ವಿನೋದ್ ಕುಮಾರ್ ಕಾಂಬಳಿ  ಎಂಬ ವ್ಯಕ್ತಿ ಸ್ವತಃ ಹೇಳಿಕೊಂಡಿರುವುದಾಗಿ ಪೋಲೀಸ್ ಅಧಿಕಾರಿ ರಿ ಹಿತೇಂದ್ರ ಕೃಷ್ಣ ಹೇಳಿದರು,
ಆರೋಪಿಗಳು ಬಾಡಿಗೆ ಮನೆಯೊಂದರಲ್ಲಿ ಕರ್ಣಾಟಕ  ಬ್ಯಾಂಕ್ ನ ನಕಲಿ ಶಾಖೆ ತೆರೆದಿದ್ದರು. ಅವರು ಸ್ಥಳೀಯರನ್ನು  ನಂಬಿಸಿದ್ದಲ್ಲದೆ ಅವರಿಂದ 1.37 ಲಕ್ಷ ಠೇವಣಿ ಹಣ ಸಂಗ್ರಹಿಸಿದ್ದರು. ಗ್ರಾಮೀಣ ಭಾಗಗಳಲ್ಲಿಶಾಖೆಯ ಫ್ರಾಂಚೈಸಿ ತೆರೆಯುವುದಕ್ಕಾಗಿ  ಜನರಿಂದ ಅರ್ಜಿಗಳನ್ನು ಪಡೆದುಕೊಂಡಿದ್ದ ಆರೋಪಿಗಳು ಒಂದು ಫ್ರಾಂಚೈಸಿಗಾಗಿ 60,000 ರೂ. ಬೇಡಿಕೆ ಇಟ್ಟಿದ್ದರು. ಕರ್ಣಾಟಕ  ಬ್ಯಾಂಕ್ ಅಧಿಕಾರಿಗಳು ಶಾಖೆಗೆ ಭೇಟಿ ನೀಡಿ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆಗ ಮುಲಾಯಂನಗರದಲ್ಲಿನ ನಕಲಿ ಶಾಖೆಯ ಬಂಡವಾಳ ಬಯಲಾಗಿದೆ. ಅದೇ ತಕ್ಷಣ ಕರ್ಣಾಟಕ  ಬ್ಯಾಂಕ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಿ.ಬಿ.ಅಧ್ಯಾಧ್ಯಾಯ,ಮತ್ತಿತರೆ ಅಧಿಕಾರಿಗಳು ಬಲಿಯಾ ಜಿಲ್ಲಾ ಪೋಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ನಕಲಿ ಬ್ಯಾಂಕ್ ಶಾಖೆಯ ಸಂಬಂಧ ಮಾಹಿತಿ ನೀಡಿದ್ದಾರೆ. 
ಈ ಮಾಹಿತಿ ಆಧಾರದ ಮೇಲೆ ಬ್ಯಾಂಕ್ ಶಾಖೆಯ ಮೇಲೆ ದಾಳಿ ನಡೆಸಿದ ಪೋಲೀಸರು ಅಹಮದ್ ನನ್ನು ಬಂಧಿಸಿದ್ದಾರೆ. ವಿಚಾರಣೆ ಸಂಬಂಧ ಅಹಮದ್ ಶಾಖೆಯ ಕೆಲಸಕ್ಕಾಗಿ ಮೂವರನ್ನು ನೇಮಕ ಮಾಡಿಕೊಂಡಿರುವುದು ತಿಳಿದು ಬಂದಿದೆ. ಇದೀಗ ಅವರನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT