ನವದೆಹಲಿ: ಎಐಸಿಸಿಯ ಸಂಘಟನಾ ಮತ್ತು ತರಬೇತಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಹಿರಿಯ ನಾಯಕ 73 ವರ್ಷದ ಜನಾರ್ಧನ್ ದ್ವಿವೇದಿ ಅವರ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಅವರನ್ನು ಆಯ್ಕೆ ಮಾಡಲಾಗಿದೆ. ಅಶೋಕ್ ಗೆಹ್ಲೋಟ್ ಅವರು 1998-2003 ಮತ್ತು 2008-13ರವರೆಗೆ ರಾಜಸ್ತಾನದ ಮುಖ್ಯಮಂತ್ರಿ ಆಗಿದ್ದರು.
ಮುಂಬರುವ ಚುನಾವಣೆಯಲ್ಲಿ ಗೆಹ್ಲೋಟ್ ರಾಜಸ್ತಾನದ ಮುಖ್ಯಮಂತ್ರಿ ಅಭ್ಯರ್ಥಿ ಆಗುವ ಲಕ್ಷಣಗಳು ತೀರ ಕ್ಷೀಣಿಸಿದೆ. ಬದಲಿಗೆ 41 ವರ್ಷದ ಸಚಿನ್ ಪೈಲಟ್ ರಾಜಸ್ತಾನದ ಸಿಎಂ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ.