ಸಿಬಿಎಸ್ಇ ಲೀಕ್: ಎಕ್ಸಾಮ್ ವಾರಿಯರ್ಸ್ ಮೋದಿ ಕಾಲೆಳೆದ ರಾಹುಲ್!
ಎಲ್ಲಾ ಕಡೆ ಲೀಕ್, ಚೌಕಿದಾರ ವೀಕ್ ಎಂದು ನೆನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ...
ನವದೆಹಲಿ: ಎಲ್ಲಾ ಕಡೆ ಲೀಕ್, ಚೌಕಿದಾರ ವೀಕ್ ಎಂದು ನೆನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಪ್ರಧಾನಿ ಮೋದಿ ಅವರು ಬರೆದಿದ್ದ ಎಕ್ಸಾಮ್ ವಾರಿಯರ್ಸ್ ಪುಸ್ತಕವನ್ನೇ ಉಲ್ಲೇಖಿಸಿ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಪರೀಕ್ಷೆ ಸಮಯದಲ್ಲಿ ಹೇಗೆ ಒತ್ತಡವನ್ನು ನಿಭಾಯಿಸುವುದು ಎಂಬುದರ ಬಗ್ಗೆ ಪ್ರಧಾನಿ ಮೋದಿ ಎಕ್ಸಾಮ್ ವಾರಿಯರ್ಸ್ ಪುಸ್ತಕವನ್ನು ಬರೆದಿದ್ದರು. ಈಗ ಎಕ್ಸಾಮ್ ವಾರಿಯರ್ಸ್ ನ ಎರಡನೇ ಭಾಗ ಬರಲಿದ್ದು, ಪೇಪರ್ ಲೀಕ್ ಆದ ನಂತರ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಉಂಟಾಗುವ ಒತ್ತಡವನ್ನು ನಿಭಾಯಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ದೇಶದಲ್ಲಿ ಪ್ರಶ್ನೆ ಪತ್ರಿಕೆಯಿಂದ ಹಿಡಿದು ಎಲ್ಲವೂ ಲೀಕ್ ಆಗುತ್ತಿದೆ, ಚೌಕಿದಾರ ( ಪ್ರಧಾನಿ ಮೋದಿ) ವೀಕ್ ಆಗಿದ್ದಾರೆ ಎಂದಿದ್ದರು.