ತಾಯಿ ಮೈಮೂನಾ ಮುಷ್ತಾಕ್‌ 
ದೇಶ

ತಾಯಿಯ ಕಣ್ಣೀರಿಗೆ ಕರಗಿದ ಉಗ್ರ ಮನೆಗೆ ವಾಪಸ್!

ಮನೆ ತೊರೆದು ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರದ ಮತ್ತೋರ್ವ ಯುವಕ ತಾಯಿ ಮತ್ತು ಕುಟುಂಬದ ಕರೆಗೆ ಓಗೊಟ್ಟು ಭಯೋತ್ಪಾದನೆ ತೊರೆದು ಮರಳಿ ಗೂಡು ಸೇರಿದ್ದಾನೆ.

 ಶ್ರೀನಗರ: ಮನೆ ತೊರೆದು ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರದ ಮತ್ತೋರ್ವ ಯುವಕ ತಾಯಿ ಮತ್ತು ಕುಟುಂಬದ ಕರೆಗೆ ಓಗೊಟ್ಟು ಭಯೋತ್ಪಾದನೆ ತೊರೆದು ಮರಳಿ ಗೂಡು ಸೇರಿದ್ದಾನೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆ ಮತ್ತು ಪೊಲೀಸರು ನಡೆಸುತ್ತಿರುವ 'ಮನೆಗೆ ಮರಳಿ ಬಾ' ಕಾರ್ಯಕ್ಕೆ ಕ್ರಮೇಣ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಮನೆ ತೊರೆದು ಉಗ್ರ ಸಂಘಟನೆ ಸೇರಿದ್ದ ಉಗ್ರನೋರ್ವ ಭಯೋತ್ಪಾದನೆ ತೊರೆದು ಮರಳಿ ಮನೆ ಸೇರಿದ್ದಾನೆ. 
ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ಶೇಶ ಪಾಲ್‌ ವೈದ್‌ ಅವರು ಗುರುವಾರ ಮಾಹಿತಿ ನೀಡಿದ್ದು, ''ಭಯೋತ್ಪಾದನೆ ಹಾದಿ ತೊರೆಯುವಂತೆ ಮತ್ತೊಬ್ಬ ತಾಯಿ ಮಾಡಿಕೊಂಡ ಮನವಿಗೆ ಮಗನಿಂದ ಉತ್ತಮ ಸ್ಪಂದನೆ ದೊರೆತಿದೆ. ಅವನ ಕುಟುಂಬಕ್ಕೆ ದೇವರು ಹರಸಲಿ ಮತ್ತು ಉಳಿದವರಿಗೂ ಅದೇ ದಾರಿ ತೋರಿಸಲಿ,'' ಎಂದು ವೈದ್‌ ಟ್ವೀಟ್‌ ಮಾಡಿದ್ದಾರೆ.  ಅಲ್ಲದೆ ಆ ಉಗ್ರಗಾಮಿ ಹಾಗೂ ಆತನ ಕುಟುಂಬದ ಬಗ್ಗೆ ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ.  
ಇತ್ತೀಚೆಗಷ್ಟೇ ಕಾಶ್ಮೀರಿ ಮಹಿಳೆ ಮೈಮೂನಾ ಮುಷ್ತಾಕ್‌ ಎಂಬುವವರು  ಶ್ರೀನಗರದ ಪ್ರೆಸ್‌ ಎನ್‌ ಕ್ಲೇವ್‌ ಗೆ ಆಗಮಿಸಿ ಕಿಕ್ಕಿರಿದು ನೆರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಾ, ತಮ್ಮ ಮಗನಿಗೆ ಮನೆಗೆ ಮರಳುವಂತೆ ಕರೆ ನೀಡಿದ್ದರು. ಆಕೆಯ ಮಗ 19 ವರ್ಷದ ಫಹಾದ್‌ ಮುಷ್ತಾಕ್‌ ವಾಜಾ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ. ಆದರೆ, ಕಳೆದ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಆತನ ಫೋಟೊ ಅಪ್‌ ಲೋಡ್‌ ಆಗಿತ್ತು. ಫೋಟೊ ಜತೆ, 'ವಾಜಾ ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆ' ಎಂಬ ಸಂದೇಶ ಬೇರೆ ಲಗತ್ತಿಸಲಾಗಿತ್ತು. 
ಇದರಿಂದ ಆತಂಕಕ್ಕೀಡಾಗಿದ್ದ ತಾಯಿ ಮೈಮೂನಾ ಮುಷ್ತಾಕ್‌ ಉಗ್ರತ್ವ ತೊರೆದು ಮರಳಿ ಮನೆಗೆ ಬರುವಂತೆ ಗೋಗರೆದಿದ್ದರು. ಇದೀಗ ತಾಯಿಯ ಕಣ್ಣೀರಿಗೆ ಕರಗಿರುವ ಉಗ್ರ ಫಹಾದ್‌ ಮುಷ್ತಾಕ್‌ ವಾಜಾ ಮನೆಗೆ ವಾಪಸ್ ಆಗಿದ್ದಾನೆ. ಪ್ರಸ್ತುತ ಫಹಾದ್‌ ಮುಷ್ತಾಕ್‌ ವಾಜಾ ವಿರುದ್ದ ಸೇನೆಯಾಗಲಿ ಅಥವಾ ಪೊಲೀಸರಾಗಲಿ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಆದರೆ ಆತ ಬದಲಾಗಬೇಕು ಎಂದು ಅಧಿಕಾರಿಗಳು ಆಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು