ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್
ನವದೆಹಲಿ; ಇರಾಕ್ ರಾಜಧಾನಿ ಮೊಸುಲ್'ನಲ್ಲಿ ಇಸಿಸ್ ಉಗ್ರರಿಂದ ಹತ್ಯೆಗೀಡಾದ 39 ಭಾರತೀಯರ ಅವಶೇಷಗಳನ್ನು ಭಾರತಕ್ಕೆ ತರುವ ಸಲುವಾಗಿ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರು ಏ.1ಕ್ಕೆ ಇರಾಕ್ ರಾಷ್ಟ್ರಕ್ಕೆ ತೆರಳಲಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ರಾಜ್ಯಸಭೆಯಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಇರಾಕ್ ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಹತ್ಯೆಗೀಡಾಗಿದ್ದಾರೆಂದು ಹೇಳಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧ ಹಾಗೂ ಆಕ್ರೋಶಗಳು ವ್ಯಕ್ತವಾಗಿದ್ದವು.
ಜನರಲ್ ವಿ.ಕೆ. ಸಿಂಗ್ ಅವರು ಇರಾಕ್'ಗೆ ತೆರಳಿ ಅವಶೇಷಗಳನ್ನು ತರುವ ಹೊಣೆಯನ್ನು ಹೊತ್ತಿದ್ದಾರೆ. ಅವಶೇಷಗಳನ್ನು ಹೊತ್ತ ವಿಮಾನ ಮೊದಲು ಅಮೃತಸರ ನಂತರ ಪಾಟ್ನ ಮತ್ತು ಕೊಲೆಗೆ ಕೋಲ್ಕತಾ ರಾಜ್ಯಕ್ಕೆ ತೆರಳಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದರು.
ಈ ಹೇಳಿಕೆಗೂ ಹಿಂದೆ ಪ್ರಕಱಣ ಸಂಬಂಧ ಮಾತನಾಡಿದ್ದ ಸುಷ್ಮಾ ಸ್ವರಾಜ್ ಅವರು ಖಚಿತ ಸಾಕ್ಷ್ಯಾಧಾರಗಳು ಸಿಗದ ಹೊರತು 39 ಮಂದಿ ಭಾರತೀಯರು ಮೃತಪಟ್ಟಿದ್ದಾರೆಂದು ಘೋಷಿಸಲು ಸಾಧ್ಯವಿಲ್ಲ ಎಂದಿದ್ದರು.
ಇಸಿಸ್ ಉಗ್ರರಿಂದ ತಪ್ಪಿಸಿಕೊಂಡು ಬಂದಿದ್ದ ಹರ್ಜಿತ್ ಮಾಸಿ ಎಂಬುವವರು, 39 ಭಾರತೀಯರನ್ನು ಇಸಿಸ್ ಉಗ್ರರು ಹತ್ಯೆ ಮಾಡಿದ್ದಾರೆಂದು ಹೇಳಿದ್ದರು. ಹರ್ಜಿತ್ ಕೆಲವು ಬಾಂಗ್ಲಾದೇಶಿ ಕೈದಿಗಳ ಜೊತೆ ಸೇರಿ ಇಸಿಸ್ ಉಗ್ರರ ಹಿಡಿತದಿಂದ ತಪ್ಪಿಸಿಕೊಂಡು ಬಂದಿದ್ದರು. ಉಗ್ರರು ತಮ್ಮ ಕಾಲಿಗೆ ಗುಂಡು ಹೊಡೆದಿದ್ದರು. ಸತ್ತಂತೆ ನಟಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಸುಷ್ಮಾ ಸ್ವರಾಜ್ ಅವರು ಸುಳ್ಳು ಎಂದು ಸ್ಪಷ್ಟಪಡಿಸಿದ್ದರು.
ಭಾರತೀಯರನ್ನು ಅಹರಿಸಿದ ಕೂಡಲೇ ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದಿದ್ದರು. ಆದರೆ, ಈ ರೀತಿ ನಡೆದಿಲ್ಲ ಎಂಬುದು ಇದೀಗ ಖಚಿತವಾಗಿದೆ ಎಂದು ಸುಷ್ಮಾ ಅವರು ತಿಳಿಸಿದ್ದರು.