ದೇಶ

39 ಭಾರತೀಯರ ಮೃತದೇಹಗಳನ್ನು ಮರಳಿ ತರಲು ಇರಾಕ್ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ: ವಿಕೆ ಸಿಂಗ್

Manjula VN
ನವದೆಹಲಿ: ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಗೀಡಾಗಿದ್ದ 39 ಭಾರತೀಯ ಮೃತದೇಹಗಳನ್ನು ಮರಳಿ ತರಲು ಇರಾಕ್ ಸರ್ಕಾರ ಒಪ್ಪಿಗಾಗಿ ಕಾಯುತ್ತಿದ್ದೇವೆಂದು ವಿದೇಶಾಂಗ ಖಾತೆಗಳ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಅವರು ಶನಿವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, 39 ಭಾರತೀಯ ಮೃತದೇಹಗಳ ಹಸ್ತಾಂತರ ಕುರಿತಂತೆ ಕಾನೂನಾತ್ಮಕ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದು, ಮೃತದೇಹಗಳನ್ನು ಭಾರತಕ್ಕೆ ತರಲು ನವದೆಹಲಿ ಬಾಗ್ದಾದ್ ನ ಒಪ್ಪಿಗೆಗಾಗಿ ಕಾಯುತ್ತಿದೆ ಎಂದು ಹೇಳಿದ್ದಾರೆ. 
39 ಭಾರತೀಯರ ಅವಶೇಷಗಳ ಕುರಿತ ಕಾನೂನಾತ್ಮಕ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿದ್ದು, ನವದೆಹಲಿ ಇದೀಗ ಬಾಗ್ದಾದ್ ಒಪ್ಪಿಗೆಗಾಗಿ ಕಾಯುತ್ತಿದೆ. ಬಾಗ್ದಾದ್ ರಾಯಭಾರಿಗಳು ಒಪ್ಪಿಗೆ ನೀಡುತ್ತಿದ್ದಂತೆಯೇ ಸಿ-17 ವಿಮಾನದ ಮೂಲಕ ಇರಾಕ್ ತೆರಳಿ ಅವಶೇಷಗಳನ್ನು ಭಾರತಕ್ಕೆ ತರಲಾಗುತ್ತದೆ. ನಂತರ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಮೃತರ ಕುಟುಂಬಸ್ಥರು ವಿಮಾನ ನಿಲ್ದಾಣಕ್ಕೆ ಬರುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 
ಬಾಗ್ದಾದ್'ಗೆ ತೆರಳಿ ಅವಶೇಷಗಳನ್ನು ಪಡೆದುಕೊಂಡ ಬಳಿಕ ಅಲ್ಲಿಂದ ಅಮೃತಸರ ಹಾಗೂ ಹಿಮಾಚಲಪ್ರದೇಶ, ಕೋಲ್ಕತಾ, ಪಾಟ್ನಾಗೆ ತೆರಳಿ ಮೃತರ ಕುಟಂಬಸ್ಥರಿಗೆ ಅವಶೇಷಗಳನ್ನು ಹಸ್ತಾಂತರ ಮಾಡಲಾಗುತ್ತಿದೆ. 
SCROLL FOR NEXT