ದೇಶ

ಭ್ರಷ್ಟ ಅಧಿಕಾರಿಗಳನ್ನು ಪತ್ತೆಹಚ್ಚಲು ಆಧಾರ್ ಮೊರೆ ಹೋಗಿರುವ ಕೇಂದ್ರ ಜಾಗೃತ ಆಯೋಗ

Sumana Upadhyaya

ನವದೆಹಲಿ; ಅನೇಕ ಹಣಕಾಸು ವಹಿವಾಟು ಮತ್ತು ಆಸ್ತಿ ವ್ಯವಹಾರಕ್ಕೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಾಗಿರುವಾಗ ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತುಗಳನ್ನು ಪತ್ತೆಹಚ್ಚಲು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು ಎಂದು ಕೇಂದ್ರ ಜಾಗ್ರತ ಆಯೋಗ ತಿಳಿಸಿದೆ.

ವ್ಯಕ್ತಿಯ ಪ್ಯಾನ್ ಸಂಖ್ಯೆ ಮೂಲಕ ಮತ್ತು ಆಧಾರ್ ಸಂಖ್ಯೆ ಮೂಲಕ ಮಾಹಿತಿಗಳು ಲಭ್ಯವಾಗುವುದರಿಂದ ಬಳಕೆದಾರರು ನಡೆಸಿರುವ ಎಲ್ಲಾ ಹಣಕಾಸಿನ ವಹಿವಾಟುಗಳು ಸಂಪೂರ್ಣವಾಗಿ ದೊರಕುತ್ತವೆ ಎಂದು  ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಹೇಳುತ್ತದೆ.

ನಾವು ಪರಿಕಲ್ಪನೆಯ ದಾಖಲೆಗಳನ್ನು ಸಿದ್ದಪಡಿಸಿದ್ದೇವೆ. ಕಾರ್ಯನಿರ್ವಹಣೆಯ ವಿಧಾನಗಳನ್ನು ತಯಾರು ಮಾಡುವ ಯೋಜನೆಯಿದ್ದು ಮತ್ತು ಸಾಧ್ಯವಾದರೆ ಕೆಲವು ಸಾಫ್ಟ್ ವೇರ್ ಗಳನ್ನು ಸಿದ್ದಪಡಿಸಿ ತನಿಖೆ ನಡೆಸಲು ಒಮ್ಮೆ ನಿರ್ಧರಿಸಿದರೆ ಆಧಾರ್ ಮೂಲಕ ನಾವು ಬೇರೆ ಇಲಾಖೆಗಳಿಂದ ಅಗತ್ಯ ವಿವರಗಳನ್ನು ಪಡೆಯಬಹುದು ಎಂದು ಕೇಂದ್ರ ಜಾಗೃತ ಆಯೋಗದ ಆಯುಕ್ತ ಕೆ.ವಿ.ಚೌಧರಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

SCROLL FOR NEXT