ಸಾಂದರ್ಭಿಕ ಚಿತ್ರ 
ದೇಶ

ಒಡಿಶಾ: ಮಂಗಗಳು ಹೊತ್ತೊಯ್ದಿದ್ದ 16 ದಿನಗಳ ಮಗು ಶವವಾಗಿ ಬಾವಿಯಲ್ಲಿ ಪತ್ತೆ

ಒಡಿಶಾದ ಕಠಕ್ ಜಿಲ್ಲೆಯ ತಲಬಸ್ತಾ ಗ್ರಾಮದಲ್ಲಿ ಮಂಗಗಳು 17 ದಿನದ ಮಗುವೊಂದನ್ನು ನಿನ್ನೆ ...

ಭುವನೇಶ್ವರ್: ಒಡಿಶಾದ ಕಠಕ್ ಜಿಲ್ಲೆಯ ತಲಬಸ್ತಾ ಗ್ರಾಮದಲ್ಲಿ ಮಂಗಗಳು 17 ದಿನದ ಮಗುವೊಂದನ್ನು ನಿನ್ನೆ ಹೊತ್ತೊಯ್ದಿದ್ದು, ಮಗು ಇಂದು ಬಾವಿಯೊಂದರಲ್ಲಿ ಪತ್ತೆಯಾಗಿದೆ.

ರಾಮಕೃಷ್ಣ ನಾಯಕ್ ಅವರ 17 ದಿನದ ಗಂಡು ಮಗುವನ್ನು ನಿನ್ನೆ ಬೆಳಗ್ಗೆ  ಮನೆಯಲ್ಲಿ ಮಲಗಿಸಿದ್ದಾಗ ಮಂಗಗಳು ಹೊತ್ತೊಯ್ದಿದ್ದವು. ಮಂಗಗಳು ಮಗುವನ್ನು ಹೊತ್ತೊಯ್ಯುತ್ತಿರುವುದನ್ನು ಮಗುವಿನ ಅಮ್ಮ ನೋಡಿದ್ದರೂ ಏನೂ ಮಾಡಲಾಗಲಿಲ್ಲ. ತಾಯಿ ಕೂಗಿಕೊಂಡಿದ್ದನ್ನು ಕೇಳಿ ಗ್ರಾಮಸ್ಥರು ಓಡಿಬಂದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಅಧಿಕಾರಿಗಳಿಗೆ ದೂರು ನೀಡಿದ್ದರು.

ಇಂದು ಹುಡುಕಾಟ ಮುಂದುವರಿಸಿದಾಗ ನಾಯಕ್ ಅವರ ಮನೆಯ ಬಳಿ ಇರುವ ಬಾವಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.

ಮಂಗಗಳು ಮಗುವನ್ನು ಬಾವಿಗೆಸೆದಿವೆ ಎಂದು ಬಾಂಕಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಿಸ್ವರಂಜನ್ ಸಹೋ ಹೇಳಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

E20 ಪೆಟ್ರೋಲ್ ನಲ್ಲಿ ಹೆಚ್ಚು ಕ್ಲೋರೈಡ್ ಮಟ್ಟ ತೋರಿಸಿದ್ದ SIAM; ಸಚಿವಾಲಯಕ್ಕೆ ಕಳುಹಿಸಿದ್ದ ಪತ್ರ ವಾಪಸ್

"ಜನ ನಾಯಗನ್ ಬಜೆಟ್': ಮಹಿಳೆಯರು, ಯುವಜನತೆಗೆ ದಳಪತಿ ವಿಜಯ್ ಬಂಪರ್ ಗಿಫ್ಟ್; ಶಾಲಾ ಶಿಕ್ಷಣಕ್ಕೆ ಅತಿ ಹೆಚ್ಚು ಅನುದಾನ