ಶೀಘ್ರವೇ ಬರಲಿವೆ ನಂಬರ್ ಪ್ಲೇಟ್ ಸಹಿತ ವಾಹನಗಳು: ಕೇಂದ್ರ ಸಚಿವ ನಿತಿನ್ ಗಡ್ಕರಿ
ನವದೆಹಲಿ: ವಾಹನಗಳ ನೋಂದಣಿ ಸಂಖ್ಯೆಯನ್ನು ಹೊಂದಿರುವ ನಂಬರ್ ಪ್ಲೇಟ್ ನ್ನು ಪ್ರಸ್ತುತ ಏಜೆನ್ಸಿಗಳಿಂದ ಪ್ರತ್ಯೇಕವಾಗಿ ಖರೀದಿಸಲಾಗುತ್ತಿದ್ದು, ಇನ್ನು ಮುಂದಿನ ದಿನಗಳಲ್ಲಿ ಇದಕ್ಕೆ ಕಡಿವಾಣ ಬೀಳಲಿದೆ.
ಇನ್ನು ಮುಂದಿನ ದಿನಗಳಲ್ಲಿ ನಂಬರ್ ಪ್ಲೇಟ್ ಸಹಿತ ವಾಹನಗಳು ಲಭ್ಯವಾಗಲಿದ್ದು, ವಾಹನ ತಯಾರಕರೇ ಅದನ್ನು ನೀಡಲಿದ್ದು, ನಾಲ್ಕು ಚಕ್ರದ ವಾಹನಗಳಿಗೆ ನಂಬರ್ ಪ್ಲೇಟ್ ನ ದರವನ್ನೂ ವಿಧಿಸಲಾಗುತ್ತದೆ.
ಈ ಬಗ್ಗೆ ರಸ್ತೆ ಮತ್ತು ಹೆದ್ದಾರಿ ಇಲಾಖೆಯ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದು, ಹೊಸ ತಂತ್ರಜ್ಞಾನದ ನಂಬರ್ ಪ್ಲೇಟ್ ನಿಂದಾಗಿ ಗ್ರಾಹಕರಿಗೆ ರಿಲೀಫ್ ಸಿಗುವುದಷ್ಟೇ ಅಲ್ಲದೇ ರಾಜ್ಯಗಳಲ್ಲಿ ಒಂದೇ ಮಾದರಿಯ ನಂಬರ್ ಪ್ಲೇಟ್ ಗಳು ಲಭ್ಯವಾಗಲಿವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos