ಕಾರ್ಮಿಕರ ದಿನದ ಗೂಗಲ್ ಡೂಡಲ್ ಚಿತ್ರ 
ದೇಶ

ಕಾರ್ಮಿಕರ ದಿನ: ಮೇ ಡೆ ವಿಶೇಷ ಡೂಡಲ್ ರಚಿಸಿದ ಗೂಗಲ್

ಮೇ 1ರ ಕಾರ್ಮಿಕ ದಿನದ ಪ್ರಯುಕ್ತ ಶ್ರಮಿಕರ ಸಮುದಾಯಕ್ಕೆ ಖ್ಯಾತ ಸರ್ಚ್ ಎಂಜಿನ್ ಗೂಗಲ್‌ ವಿಶೇಷ ಡೂಡಲ್‌ ಗೌರವ ಸಲ್ಲಿಸಿದೆ.

ನವದೆಹಲಿ: ಮೇ 1ರ ಕಾರ್ಮಿಕ ದಿನದ ಪ್ರಯುಕ್ತ ಶ್ರಮಿಕರ ಸಮುದಾಯಕ್ಕೆ ಖ್ಯಾತ ಸರ್ಚ್ ಎಂಜಿನ್ ಗೂಗಲ್‌ ವಿಶೇಷ ಡೂಡಲ್‌ ಗೌರವ ಸಲ್ಲಿಸಿದೆ.
ವಿವಿಧ ವೃತ್ತಿರಂಗದ ಕಾರ್ಮಿಕರು ಬಳಸುವ ಸಲಕರಣೆಗಳು, ಸಾಧನಗಳ ಚಿತ್ರಗಳನ್ನು ಡೂಡಲ್‌ನಲ್ಲಿ ಗೂಗಲ್ ಬಿಂಬಿಸಿದ್ದು, ಆ ಮೂಲಕ ಕಾರ್ಮಿಕರಿಗೆ ಗೌರವ ಸೂಚಿಸಿದೆ. ಕಾರ್ಮಿಕರ ಶ್ರಮದ ಸೂಚಕವಾಗಿ ಆಚರಿಸುವ ಈ ದಿನಕ್ಕೆ ‘ಮೇ ಡೇ’ ಎಂತಲೂ ಕರೆಯುತ್ತಾರೆ.
ಕಾರ್ಮಿಕರ ದಿನದ ಹಿನ್ನೆಲೆ
ಕಾರ್ಮಿಕರ ದಿನ ಆಚರಣೆಯ ಮೂಲ ಇರುವುದು ಅಮೆರಿಕಾದಲ್ಲಿ.. 19ನೇ ಶತಮಾನದಲ್ಲಿ ನಡೆದ ಕಾರ್ಮಿಕ ಚಳವಳಿಗಳಲ್ಲಿ. ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ನಿಗದಿ ಪಡಿಸಲು, ದುಡಿಯುವ ಪರಿಸರದಲ್ಲಿ ಮೂಲಸೌಕರ್ಯ ಒದಗಿಸಲು ಮತ್ತು ಕಾರ್ಮಿಕರ ಹಿತರಕ್ಷಣೆ ಕಾನೂನುಗಳನ್ನು ರೂಪಿಸಲು ಪಟ್ಟುಹಿಡಿದ ಕಾರ್ಮಿಕ ಒಕ್ಕೂಟದ ಸದಸ್ಯರು, ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಧರಣಿ ಹೂಡಿದ್ದರು. ದಿನದ 24 ಗಂಟೆಗಳಲ್ಲಿ 8 ಗಂಟೆ ಕೆಲಸಕ್ಕೆ, 8 ಗಂಟೆ ಮನೋಲ್ಲಾಸಕ್ಕೆ ಮತ್ತು 8 ಗಂಟೆ ವಿಶ್ರಾಂತಿಗೆ ಮೀಸಲಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು. ಅಂದು ಕಾರ್ಮಿಕರ ಹೋರಾಟಕ್ಕೆ ಬಂಡವಾಳ ದಾರರು ಮಣಿದಿದ್ದರು.
ಇನ್ನು ಭಾರತದಲ್ಲಿ 1923 ಮೇ 1ರಂದು ಚೆನ್ನೈನಲ್ಲಿ(ಮದ್ರಾಸ್‌) ಮೊದಲಿಗೆ ಈ ದಿನ ಆಚರಿಸಲಾಯಿತು. ಅಂದಿನ ಹಿಂದೂಸ್ತಾನ್‌ ಕಿಸಾನ್‌ ಪಕ್ಷವು ಈ ಆಚರಣೆಗೆ ನಾಂದಿಹಾಡಿತು. ಈ ದಿನವನ್ನು ರಾಷ್ಟ್ರೀಯ ರಜಾ ದಿನವೆಂದು ಘೋಷಿಸಲು ಪಕ್ಷವು ಅಂದೇ ಒತ್ತಾಯಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT