ದೇಶ

ಕಾರ್ಮಿಕರಿಗೆ ದಿನಕ್ಕೆ ಕ್ಯಾಲೋರಿಗಳ ಲೆಕ್ಕದಲ್ಲಿ ವೇತನ ನೀಡಲು ಸಾಧ್ಯವಿಲ್ಲ: ಸಮಿತಿ ವಿರುದ್ಧ ಸಿಎಂ ಕೇಜ್ರಿವಾಲ್ ಕೆಂಡಾಮಂಡಲ

Srinivas Rao BV
ನವದೆಹಲಿ: ದೆಹಲಿಯ ಕಾರ್ಮಿಕರ ವೇತನವನ್ನು ಹೆಚ್ಚಳ ಮಾಡಿದ್ದ ಸಮಿತಿ, ಕಾರ್ಮಿಕರಿಗೆ ದಿನವೊಂದಕ್ಕೆ 2,700 ಕ್ಯಾಲೋರಿಗಳು ಬೇಕಾಗುತ್ತದೆ ಎಂದು ಹೇಳಿದ್ದಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೆಂಡಾಮಂಡಲರಾಗಿದ್ದಾರೆ. 
ದೆಹಲಿ ಕಾರ್ಮಿಕರ ತಿಂಗಳ ಕನಿಷ್ಠ ವೇತನವನ್ನು 9,500 ರೂಪಾಯಿಗಳಿಂದ 13,500 ಗಳಿಕೆ ಏರಿಕೆ ಮಾಡಲಾಗಿತ್ತು. ವೇತನ ಪರಿಷ್ಕರಣೆ ಮಾಡಿರುವ ಸಮಿತಿ ಕಾರ್ಮಿಕರಿಗೆ ದಿನವೊಂದಕ್ಕೆ 2,700 ಕ್ಯಾಲೊರಿಗಳ ಅಗತ್ಯವಿರುತ್ತದೆ ಎಂದು ಹೇಳಿದೆ. 
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ದೆಹಲಿ ಸಿಎಂ ಕೇಜ್ರಿವಾಲ್, ಕ್ಯಾಲೊರಿಗಳಿಗೆ ತಕ್ಕಂತೆ ಕಾರ್ಮಿಕರಿಗೆ ವೇತನ ನೀಡಲಾಗುವುದಿಲ್ಲ. ಕಾರ್ಮಿಕರು ಮನುಷ್ಯರು, ಪ್ರಾಣಿಗಳಲ್ಲ. ಕಾರ್ಮಿಕರು ತಮ್ಮ ಮಕ್ಕಳನ್ನು ಓದಿಸಬೇಕಾಗುತ್ತದೆ. 
ಅವರಿಗೆ ಬಟ್ಟೆ ತೆಗೆದುಕೊಡಬೇಕಾಗುತ್ತದೆ. ಐಎಎಸ್ ಅಧಿಕಾರಿಗಳಿಗೆ ಕ್ಯಾಲೊರಿಗಳ ಅಗತ್ಯತೆಗೆ ತಕ್ಕಂತೆ ವೇತನ ನೀಡಬಹುದು ಆದರೆ ಕಾರ್ಮಿಕರಿಗೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಮೇ.1 ರಂದು ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಾರ್ಮಿಕರ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ವೇಳೆ ಹೇಳಿದ್ದಾರೆ. 
SCROLL FOR NEXT