ದೇಶ

ಏರ್ಸೆಲ್ ಮ್ಯಾಕ್ಸಿಸ್‌ ಪ್ರಕರಣ: ಜು.10ರವರೆಗೆ ಕಾರ್ತಿ ಚಿದಂಬರಂ ಬಂಧನವಿಲ್ಲ

Raghavendra Adiga
ನವದೆಹಲಿ: 2ಜಿ ಹಗರಣ ಸಂಬಂಧ ಏರ್ಸೆಲ್ ಮ್ಯಾಕ್ಸಿಸ್‌ ವಿಷಯದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಜುಲೈ 10ರ ತನಕ ಬಂಧನದಿಂದ ರಕ್ಷಣೆ ನಿಡಿರುವುದಾಗಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
ಕಾರ್ತಿ ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಕುರಿತ ವಾದಕ್ಕೆ ಕಾಲಾವಕಾಶ ಕೋರಿದ ಜಾರಿ ನಿರ್ದೇಶನಾಲಯ  ಮನವಿ ಸಲ್ಲಿಸಿತ್ತು. ಇದನ್ನು ಅನುಸರಿಸಿ ವಿಶೇಷ ನ್ಯಾಯಾಧೀಶರಾದ ಒ ಪಿ ಸೈನಿ ಕಾರ್ತಿ ಚಿದಂಬರಂ ಗೆ ಜುಲೈ 10ರವರೆಗೂ ಬಂಧನದಿಂದ ರಕ್ಷಣೆ ನಿಡುವುದಾಗಿ ಆದೇಶಿಸಿದರು.
ಜಾರಿ ನಿರ್ದೇಶನಾಲಯದ ಪರ ವಕೀಲ ನಿತೇಶ್‌ ರಾಣಾ ಇದೇ ಕೇಸಿನ ಸಂಬಂಧದ ಒಂದು ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಮುಂದಿದೆ. ಹೀಗಾಗಿ ಈ ವಿಚಾರಣೆಯನ್ನು ಮುಂದೂಡಬೇಕಿದೆ ಎಂದು ಕೋರಿಕೆ ಸಲ್ಲಿಸಿದ್ದರು. ಜುಲೈ 2ರಂದು ತಾನು ಇಅರ ಸಂಬಂಧ ವಾದ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯದ ವಾದವನ್ನು ಬೆಂಬಲಿಸಿದ್ದ ಸಿಬಿಐ ಪ್ರಕರಣದ ವಿಚಾರಣೆ ಮುಂದೂಡುವಂತೆ ತಾನೂ ಮನವಿ ಮಾಡಿತ್ತು.
SCROLL FOR NEXT