ದೇಶ

ಒಂದೇ ಸೂರಿನಡಿ 11 ಕೃಷಿ ಯೋಜನೆಗಳನ್ನು ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನೇತೃತ್ವದ ಆರ್ಥಿಕ ವ್ಯವಹಾರಗಳ ಆರ್ಥಿಕ ಸಮಿತಿ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಯನ್ನು ಮತ್ತೆರಡು ವರ್ಷಗಳವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.

ಕೃಷೋನ್ನತಿ ಯೋಜನೆ-ಹಸಿರು ಕ್ರಾಂತಿಯಡಿ ಕೃಷಿಗೆ ಸಂಬಂಧಿಸಿದ 11 ಕೃಷಿ ಯೋಜನೆಗಳನ್ನು ಒಂದೇ ಸೂರಿನಡಿ ತರಲು ಉದ್ದೇಶಿಸಲಾಗಿದೆ.

ಈ ಯೋಜನೆಯನ್ನು ಕಳೆದ ವರ್ಷ ಜಾರಿಗೆ ತರಲಾಗಿದ್ದು 12ನೇ ಪಂಚವಾರ್ಷಿಕ ಯೋಜನೆಯಿಂದ ನಂತರವೂ ಮುಂದುವರಿಸಲು ಅನುಮೋದನೆ ನೀಡಲಾಯಿತು. ಇದಕ್ಕೆ ಮೂರು ವರ್ಷಗಳ ಕಾಲ 2017ರಿಂದ 2020ರವರೆಗೆ ಕೇಂದ್ರ ಸರ್ಕಾರದಿಂದ 33,279 ಕೋಟಿ ರೂಪಾಯಿ ನೆರವು ಸಿಗಲಿದೆ.

ರೈತರ ಆದಾಯವನ್ನು ದ್ವಿಗುಣಗೊಳಿಸಲು 11 ಯೋಜನೆಗಳನ್ನು ಒಂದೇ ಸೂರಿನಡಿ ತರಲು ನಮ್ಮ ಸರ್ಕಾರ ಯೋಜಿಸಿದೆ, ಇದೊಂದು ಐತಿಹಾಸಿಕ ನಿರ್ಧಾರ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಕೃಷಿ ಮತ್ತು ಸಂಬಂಧಿತ ವಲಯಗಳನ್ನು ಸಮಗ್ರ ಮತ್ತು ವೈಜ್ಞಾನಿಕ ರೀತಿಯಲ್ಲಿ ಹೆಚ್ಚಿಸಿ, ರೈತರ ಉತ್ಪನ್ನ ಮತ್ತು ಉತ್ಪಾದನೆಯನ್ನು ಹೆಚ್ಚಿಸಿ ಉತ್ತಮ ಇಳುವರಿ ದೊರಕಿಸಿಕೊಡುವಂತೆ ಮಾಡಿ ಆದಾಯ ಹೆಚ್ಚಿಸಲು ಈ ಯೋಜನೆಗಳು ನೆರವು ನೀಡಲಿದೆ.

ಇವುಗಳಲ್ಲಿ ಪ್ರಮುಖ ಯೋಜನೆಗಳು ನ್ಯಾಷನಲ್ ಫುಡ್ ಸೆಕ್ಯುರಿಟಿ ಮಿಷನ್ (ಎನ್ಎಫ್ಎಸ್ಎಮ್), ರಾಷ್ಟ್ರೀಯ ಮಿಷನ್ ಫಾರ್ ಸಸ್ಟೈನಬಲ್ ಅಗ್ರಿಕಲ್ಚರ್ (ಎನ್ಎಂಎಸ್ಎ), ಕೃಷಿ ಯಾಂತ್ರಿಕತೆ (ಎಸ್ಎಂಎಎಂ) ಮತ್ತು ಕೃಷಿ ಮಾರ್ಕೆಟಿಂಗ್ (ಐಎಸ್ಎಎಂ) ಮೇಲೆ ಇಂಟಿಗ್ರೇಟೆಡ್ ಸ್ಕೀಮ್ನ ಉಪ-ಮಿಷನ್ ಗಳಾಗಿವೆ.

SCROLL FOR NEXT