ನವದೆಹಲಿ: ನ್ಯಾ.ಕೆಎಂ ಜೋಸೆಫ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ನೀಡುವುದರ ವಿಷಯದ ಬಗ್ಗೆ ಕೊಲಿಜಿಯಂ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಪದೋನ್ನತಿ ಕುರಿತ ನಿರ್ಧಾರವನ್ನು ಮುಂದೂಡಲಾಗಿದೆ.
ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಮತ್ತೊಂದಷ್ಟು ಸುತ್ತಿನ ಸಭೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳ ಸಮಿತಿ (ಕೊಲಿಜಿಯಂ) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಮಿಶ್ರ, ನ್ಯಾ. ಚಲಮೇಶ್ವರ್, ನ್ಯಾ.ರಂಜನ್ ಗೋಗೋಯಿ, ನ್ಯಾ.ಮದನ್ ಬಿ ಲೋಕುರ್. ನ್ಯಾ.ಕೆ.ಎಂ ಜೋಸೆಫ್ ಅವರಿದ್ದ ಕೊಲಿಜಿಯಂ ಸಭೆ ಮೇ.02 ರಂದು ನಡೆದಿದ್ದು, ಸರ್ಕಾರ ನ್ಯಾ. ಜೋಸೆಫ್ ಜೋಸೆಫ್ ಅವರ ಪದೋನ್ನತಿ ಶಿಫಾರಸ್ಸನ್ನು ವಾಪಸ್ ಕಳಿಸಿತ್ತು. ಈಗ ಈ ಬಗ್ಗೆ ಸಭೆ ನಡೆಸಲಾಗಿದ್ದು, ಅಂತಿಮ ನಿರ್ಧಾರವನ್ನು ಕೊಲಿಜಿಯಂ ಇನ್ನಷ್ಟು ಸಭೆ ನಡೆಸಿದ ಬಳಿಕ ತೆಗೆದುಕೊಳ್ಳುವುದಾಗಿ ಹೇಳಿದೆ.