ಸಾಂದರ್ಭಿಕ ಚಿತ್ರ 
ದೇಶ

ಮದರಸಾದಲ್ಲಿ ಎಚ್ಚರವಾದಾಗ ನನ್ನ ಬಟ್ಟೆ ಒದ್ದೆಯಾಗಿತ್ತು: 11 ವರ್ಷದ ಅತ್ಯಾಚಾರ ಸಂತ್ರಸ್ತೆ

ಮದರಸಾದಲ್ಲಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಕ್ಲರ್ಕ್ ನನ್ನು ಕಳೆದ ವಾರ...

ಘಾಜಿಪುರ: ಮದರಸಾದಲ್ಲಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಕ್ಲರ್ಕ್ ನನ್ನು ಕಳೆದ ವಾರ ಬಂಧಿಸಿದ್ದಾರೆ.
ಭಯಾನಕ ಘಟನೆ ಕುರಿತು ಸಂತ್ರಸ್ತೆ ತನ್ನ ಅಳಲು ತೋಡಿಕೊಂಡಿದ್ದಾಳೆ ಆರೋಪಿ ಬಲವಂತವಾಗಿ ನನ್ನನ್ನು ಮದರಸಾದೊಳಗೆ ಕರೆದುಕೊಂಡು ಹೋದ. ಒಂದು ವೇಳೆ ನಾನು ಬರದಿದ್ದರೇ ನನ್ನ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. 
ಬಲವಂತವಾಗಿ ನನ್ನ ಫೋನ್ ಕಸಿದುಕೊಂಡ, ಮದರಸಾ ಮಾಲೀಕ ಕೂಡ ನನಗೆ ಬೆದರಿಕೆ ಹಾಕಿದ ಎಂದು 11 ವರ್ಷದ ಸಂತ್ರಸ್ತೆ ತಿಳಿಸಿದ್ದಾಳೆ.ನನಗೆ ಕುಡಿಯಲು ನೀರು ಕೊಟ್ಟ ಮೇಲೆ ಅದನ್ನು ಕುಡಿದ ನಂತರ ನಾನು ನಿದ್ರೆಗೆ ಜಾರಿದೆ, ಮಾರನೇ ದಿನ ನಾನು ಎಚ್ಚರವಾದಾಗ ನನ್ನ ಬಟ್ಟೆಗಳು ಒದ್ದೆಯಾಗಿದ್ದವು ಎಂದು ಹೇಳಿದ್ದಾಳೆ, 
ಏಪ್ರಿಲ್ 21 ರಂದು ಮಾರುಕಟ್ಟೆಗೆ ಹೋಗಿದ್ದ ಬಾಲಕಿ ನಾಪತ್ತೆಯಾಗಿದ್ದಳುಸ, ನಂತರ ಆಕೆಯ ತಂದೆ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಫೂಟೇಜ್ ನಲ್ಲಿ ವ್ಯಕ್ತಿಯೊಬ್ಬ ಆಕೆಯನ್ನು ಕರೆದೊಯ್ಯುತ್ತಿದ್ದನ್ನು ಗಮನಿಸಿದ್ದರು,  ನಂತರ ಬಾಲಕಿಯ ಮೊಬೈಲ್ ಕರೆ ದಾಖಲೆ ಅನುಸರಿಸಿದಾಗ ಆಕೆ ಗಾಜಿಯಾಬಾದ್ ನ ಮದರಸಾದಲ್ಲಿರುವುದು ತಿಳಿದು ಬಂತು. 
ಬಾಲಾಪರಾಧಿಯೊಬ್ಬ ಆಕೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ, ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು,  ಬಾಲಾಪರಾಧಿಯನ್ನು ರಿಮ್ಯಾಂಡ್ ಹೋಮ್ ಗೆ ಕಳುಹಿಸಲಾಗಿದೆ. ಏಪ್ರಿಲ್ 28 ರಂದು ಪ್ರಮುಖ ಆರೋಪಿ ಗುಲಾಮ್ ಸಹಿದ್ ನನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Watch| Traffic Fine ಗೆ ಶೇ.50 ರಷ್ಟು ರಿಯಾಯಿತಿ; ವಂಚಕರಿಂದ ಮೋಸಹೋದ ಟೆಕ್ಕಿ!; Dharmasthala Case: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ SIT ದಾಳಿ; ಮೊಬೈಲ್ ವಶಕ್ಕೆ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT