ಪಂಜಾಬ್: ಪ್ರೇಮ ವಿವಾಹವನ್ನೇ ನಿಷೇಧಿಸಿದ ಗ್ರಾಮ! 
ದೇಶ

ಪಂಜಾಬ್: ಈ ಗ್ರಾಮದಲ್ಲಿ ಪ್ರೇಮ ವಿವಾಹವೇ ನಿಷೇಧ!

ಯುವಜೋಡಿಯೊಂದು ಪ್ರೇಮಿಸಿ ವಿವಾಹವಾದ ಕಾರಣ ಗ್ರಾಮಪಂಚಾತ್ ಒಂದು ಗ್ರಾಮದಲ್ಲಿ ಪ್ರೇಮ ವಿವಾಹಕ್ಕೇ ನಿಷೇಧ ಹೇರಿದೆ.

ಲೂಧಿಯಾನ(ಪಂಜಾಬ್): ಯುವಜೋಡಿಯೊಂದು ಪ್ರೇಮಿಸಿ ವಿವಾಹವಾದ ಕಾರಣ ಗ್ರಾಮ ಪಂಚಾತ್ ಒಂದು ಗ್ರಾಮದಲ್ಲಿ ಪ್ರೇಮ ವಿವಾಹಕ್ಕೇ ನಿಷೇಧ ಹೇರಿದೆ. 
ಪಂಜಾಬ್ ನ ಲೂಧಿಯಾನ ಜಿಲ್ಲೆ ದೊರಾಹಾ ನಗರದ ಚಂಕೋಯಿಯನ್ ಖುರ್ದ್ ಗ್ರಾಮ ಪಂಚಾಯತ್ ಇಂತಹಾ ವಿಚಿತ್ರ ನಿರ್ಣಯ ತೆಗೆದುಕೊಂಡು ಅಚ್ಚರಿ ಮೂಡಿಸಿದೆ.
ಅಕ್ಕ ಪಕ್ಕದ ಹಳ್ಳಿಯವರಾದ ಯುವಕ, ಯುವತಿ ಪ್ರೇಮಿಸಿ ವಿವಾಹವಾಗಿದ್ದರು. ಆದರೆ ಅವರು ತಮ್ಮ ಕುಟುಂಬದ ಒಪ್ಪಿಗೆ ಪಡೆದಿರಲಿಲ್ಲ. ಈ ಕಾರಣದಿಂದ ಆಕ್ರೋಶಗೊಂಡ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದಲ್ಲಿ ಪ್ರೇಮ ವಿವಾಹವನ್ನು ನಿಷೇಧಿಸಿದ್ದಲ್ಲದೆ ನವ ವಿವಾಹಿತ ಜೋಡಿ ಹಾಗೂ ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಿದೆ.
ಗ್ರಾಮದ ಯಾವುದೇ ಯುವಕ ಅಥವಾ ಯುವತಿ ಪೋಷಕರ ಅನುಮತಿ ಇಲ್ಲದೆ ಸ್ವ ಇಚ್ಚೆಯಿಂದ ಮದುವೆಯಾಗಿದ್ದರೆ ಅಂತಹಾ ಯುವಕ, ಯುವತಿಯರಿಗೆ ಸಾರ್ವಜನಿಕವಾಗಿ ಬಹಿಷ್ಕಾರ ಹಾಕಲಾಗುವುದು. ಒಂದು ವೇಳೆ ಗ್ರಾಮ ಪಂಚಾಯತ್ ಆದೇಶ ಉಲ್ಲಂಘನೆ ಮಾಡಿ ಅವರ ಕುಟುಂಬ ಅವರೊಡನೆ ವ್ಯವಹರಿಸಿದ್ದು ಕಂಡುಬಂದಲ್ಲಿ ಆ ಕುಟುಂಬಕ್ಕೆ ಸಹ ಬಹಿಷ್ಕಾರ ಶಿಕ್ಷೆ ನಿಡಲಾಗುತ್ತದೆ.
ಚಂಕೋಯಿಯನ್ ಖುರ್ದ್ ಗ್ರಾಮಪಂಚಾಯತ್ ಏ.29ರಂದು ಈ ನಿಣಯವನ್ನು ಅಂಗೀಕರಿಸಿದೆ. ಸ್ಥಳೀಯ ಗುರುದ್ವಾರ ಸಮಿತಿ ಹಾಗೂ ಗ್ರಾಮದ ಸ್ಪೋರ್ಟ್ಸ್‌ ಕ್ಲಬ್‌ಗ ಸಹ ಈ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದೆ.
ನವ ಜೋಡಿಗೆ ಗ್ರಾಮದ ಯಾವ ಅಂಗಡಿಯವರು ದಿನಸಿ ನೀಡಬಾರದು. ಗ್ರಾಮದಲ್ಲಿನ ಸಾರ್ವಜನಿಕ ಪ್ರದೇಶಗಳನ್ನು ಅವರು ಬಳಸುವಂತಿಲ್ಲ. ಪಂಚಾಯತ್, ಗುರುದ್ವಾರಗಳಿಂದ ಅವರು ಯಾವ ಸೌಲಭ್ಯ ಪಡೆಯುವಂತಿಲ್ಲ ಎಂದು ನಿರ್ಬಂಧಗಳನ್ನು ಹಾಕಲಾಗಿದೆ.
ವಿವಾಹಿತ ವಧುವಿನ ಕುಟುಂಬವೇ ನಮಗೆ ಇಂತಹಾ ನಿರ್ಣಯ ತೆಗೆದುಕೊಳ್ಳುವಂತೆ ಹೇಳಿತ್ತು ಎಂದು ಪಂಚಾಯತ್ ಮುಖ್ಯಸ್ಥರಾದ ಹಕಮ್ ಸಿಂಗ್ಹೇಳಿದ್ದಾರೆ. ಆದರೆ ಇದು ಕಾನೂನು ಸಮ್ಮತವಾದ ಕ್ರಮವಲ್ಲ, ಇದರಿಂದ ಸಂವಿಧಾನ, ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಲೂಧಿಯಾನ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹೇಳಿದ್ದಾರೆ.
ಗ್ರಾಮದಲ್ಲಿ ಇದುವರೆವಿಗೆ 6 ಜೋಡಿ ಪ್ರೇಮ ವಿವಾಹವಾಗಿದ್ದರು. ಅವರೆಲ್ಲರೂ ತಮ್ಮ ಪೋಷಕರ ಸಮ್ಮತಿಯಿಂದ ವಿವಾಹವಾಗಿದ್ದರು. ಆದರೆ ಈ ಜೋಡಿ ಮಾತ್ರ ಅವರ ವಿರುದ್ಧ ನಡೆದಿರುವುದರಿಂದ ಗ್ರಾಮಸ್ಥರೆಲ್ಲಾ ಸೇರಿ ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಹಳ್ಳಿಯ ಮುಖಂಡರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT