'ಕರ್ನಾಟಕದ ಮೋಸ್ಟ್ ವಾಂಟೆಡ್' ಶೀರ್ಷಿಕೆಯಡಿಯಲ್ಲಿ ವಿಡಿಯೋ ಪೋಸ್ಟ್: ಪ್ರಧಾನಿ ಮೋದಿಗೆ ಕಾಂಗ್ರೆಸ್ ತಿರುಗೇಟು
ಬೆಂಗಳೂರು: ಕರ್ನಾಟಕ ರಾಜ್ಯದ ಅಭಿವೃದ್ಧಿ ಕುರಿತು 15 ನಿಮಿಷ ಮಾತನಾಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕೆಲ ದಿನಗಳ ಹಿಂದಷ್ಟೇ ಸವಾಲು ಹಾಕಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಶನಿವಾರ ತಿರುಗೇಟು ನೀಡಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ಮೋದಿ ಜೀ...ನೀವು ತುಂಬಾ ಮಾತನಾಡುತ್ತೀರಿ, ಆದರೆ, ನಿಮ್ಮ ಮಾತಿಗೂ ಕ್ರಿಯೆಗೂ ತಾಳೆಯಾಗುವುದಿಲ್ಲ. ಕರ್ನಾಟಕದಲ್ಲಿ ಎಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೀರಿ ಎಬುದಕ್ಕೆ ಇಲ್ಲಿದೆ ಚಿಕ್ಕ ವಿಡಿಯೋ. ಇದು ಕರ್ನಾಟಕದ ಮೋಸ್ಟ್ ವಾಂಟೆಡ್ ಎಪಿಸೋಡ್'ನಂತೆ ಬಿತ್ತರವಾಗುತ್ತದೆ ಎಂದು ಹೇಳಿದೆ.
ಕಾಂಗ್ರೆಸ್ ಟ್ವೀಟ್ ಮಾಡಿರುವ ವಿಡಿಯೋ ಒಟ್ಟು 1 ನಿಮಿಷ 20 ಸೆಕೆಂಡ್ ಗಳ ಕಾಲವಿದ್ದು, ಉತ್ತರ ನೀಡಿ ಮೋದಿ ಎಂಬ ಹ್ಯಾಶ್ ಟ್ಯಾಗ್ ಮೂಲಕ, ಪ್ರಧಾನಿ ಮೋದಿಯವರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.
ವಿಡಿಯೋದಲ್ಲಿ, ರೆಡ್ಡಿ ಗ್ಯಾಂಗ್ 8 ಟಿಕೆಟ್ ನೀಡಿರುವುದರ ಬಗ್ಗೆ 5 ನಿಮಿಷ ಮಾತನಾಡುವಿರಾ...? ಭ್ರಷ್ಟಾಚಾರ ಆರೋಪಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದ್ದೀರಿ...ಹಾಗೆಯೇ ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿರುವ ಬಿಜೆಪಿಯ 11 ನಾಯಕರಾದ ಶ್ರೀರಾಮುಲು, ಸೋಮಶೇಖರ್ ರೆಡ್ಡಿ, ಸುರೇಶ್ ಬಾಬು, ಕಟ್ಟಾ ಸುಬ್ರಮಣ್ಯ ನಾಯ್ಡು, ಸಿಟಿ ರವಿ, ಮುರುಗೇಶ್ ನಿರಾಣಿ, ಕೃಷ್ಣಯ್ಯ ಶೆಟ್ಟಿ ಮಾಲೂರು, ಶಿವಣ್ಣಗೌಡ ನಾಯಕ, ಆರ್. ಅಶೋಕ್, ಶೋಭಾ ಕರಂದ್ಲಾಜೆ, ರೆಡ್ಡಿ ಸದೋರರ ಬಗ್ಗೆ ತುಟಿ ಬಿಚ್ಚುತ್ತೀರಾ?... ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇವೆಂದು ಸವಾಲು ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics