ನವದೆಹಲಿ: ಉತ್ತರ ಪ್ರದೇಶದ ಸರ್ಕಾರಿ ಶಾಲೆಯೊಂದರ ಶಿಕ್ಷಕರ ನೇಮಕವನ್ನು ರದ್ದುಗೊಳಿಸಿದ್ದನ್ನು ತೆಗೆದುಹಾಕಿ ಮತ್ತೆ ನೇಮಕ ಮಾಡುವಂತೆ 1992ರಲ್ಲಿ ಅಲಹಾಬಾದ್ ಕೋರ್ಟ್ ನಲ್ಲಿ ಸೇವೆಯಲ್ಲಿದ್ದಾಗ ಆದೇಶ ನೀಡಿದ್ದಕ್ಕಾಗಿ ತಮ್ಮ ವಿರುದ್ಧ ದೋಷಾರೋಪಣೆ ಕೇಳಿಬಂದಿತ್ತು ಎಂದು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನ ಅತ್ಯಂತ ಹಿರಿಯ ನ್ಯಾಯಾಧೀಶರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಾತಿ ಮಾಡುವ ಪ್ರಕ್ರಿಯೆ ಸಂಪ್ರದಾಯವು ದೋಷಯುಕ್ತ ಎಂದು ಸಾಬೀತಾಗಿರುವುದರಿಂದ ಅದನ್ನು ತೆಗೆದುಹಾಕಬೇಕೆಂದು ಹೇಳಿದೆ.
ದೆಹಲಿ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್ ಗಳ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ಮಾರ್ಕಂಡೆ ಕಟ್ಸು,ವಿದರ್ ಇಂಡಿಯನ್ ಜ್ಯುಡಿಷಿಯರಿ ಎಂಬ ಪುಸ್ತಕ ಬರೆದಿದ್ದು ಅದರಲ್ಲಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಒಳನೋಟದ ಬಗ್ಗೆ ವಿಸ್ತ್ರೃತವಾಗಿ ಬರೆದಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಕದ ಬಗ್ಗೆ ಅದರಲ್ಲಿ ಬರೆದಿರುವ ಅವರು, ಸೇವೆಯಲ್ಲಿ ಅತ್ಯಂತ ಹಿರಿಯ ನ್ಯಾಯಾಧೀಶ ಸಮಗ್ರತೆಯನ್ನು ಕಾಯ್ದುಕೊಳ್ಳುವ ವ್ಯಕ್ತಿಯಾಗಿರಬಹುದು ಮತ್ತು ಮಾಧ್ಯಮಗಳಿಗೆ ಹೆಚ್ಚು ಪ್ರಭಾವಿತನಾಗಿರುವವನೂ ಕೂಡ ಆಗಿರಬಹುದು. ಅವರಿಗಿಂತ ಕೆಳಗಿನ ಸ್ಥಾನದಲ್ಲಿರುವ ಅದ್ವಿತೀಯ ಸೇವೆ ನೀಡುತ್ತಿರುವ ನ್ಯಾಯಾಧೀಶನನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅವರು ತಾವು ಬರೆದಿರುವ ಪುಸ್ತಕದಲ್ಲಿ ನ್ಯಾಯಾಧೀಶರ ನೇಮಕ,ನ್ಯಾಯಾಂಗ ನಿಂದನೆ, ನ್ಯಾಯ ವಿಲೇವಾರಿಯಲ್ಲಿ ವಿಳಂಬ ಮತ್ತು ಭಾರತೀಯ ನ್ಯಾಯಾಂಗ ಎದುರಿಸುತ್ತಿರುವ ಸವಾಲುಗಳ ಕುರಿತು ವಿಶ್ಲೇಷಣೆ ಮಾಡಿದ್ದಾರೆ.
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರಾಗಿರುವ ಕಟ್ಸು, ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಹೇಳಿದ್ದಾರೆ.ನ್ಯಾಯಾಂಗ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ಮಾಡಲು ಎಲ್ಲರೂ ಅವಿರೋಧ ಮತ್ತು ಸಂಚಿತ ಪ್ರಯತ್ನಗಳನ್ನು ಮಾಡಬೇಕು. ನಮಗೆ ಮೂಲಭೂತ ಸುಧಾರಣೆಗಳು ಮತ್ತು ಬಲವಾದ ಇಚ್ಛೆ ಮತ್ತು ನಿಜವಾದ ಬದಲಾವಣೆಯನ್ನು ಮಾಡಲು ಬದ್ಧತೆಯ ಅಗತ್ಯವಿರುತ್ತದೆ. ಆದರೆ ಇದು ಸಾಧ್ಯವಾಗುತ್ತದೆಯೇ ಎಂದು ನನಗೆ ಸಂಶಯವಿದೆ. ಅದಕ್ಕೆ ಪೂರಕ ವಾತಾವರಣವಿಲ್ಲ ಎಂದು ಮಾರ್ಕಂಡೆ ಕಾಟ್ಸು ಹೇಳುತ್ತಾರೆ.