ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆಸಲಾದ ಎನ್'ಕೌಂಟರ್ ನಲ್ಲಿ ಭಾರತೀಯ ಸೇನಾಪಡೆ 5 ಉಗ್ರರನ್ನು ಹೊಡೆದುರುಳಿಸಿದೆ ಎಂದು ಭಾನುವಾರ ತಿಳಿದುಬಂದಿದೆ.
ಬದಿಗಾಮ್ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವುದಾಗಿ ಖಚಿತ ಮಾಹಿತಿ ದೊರಕಿದ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರೆದು, ಕಾರ್ಯಾಚರಣೆ ಆರಂಭಿಸಿದ್ದವು. ಕಾರ್ಯಾಚರಣೆಯಲ್ಲಿ ಇದೀಗ 5 ಉಗ್ರರುನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದೆ ಎಂದು ವರದಿಗಳಿಂದ ತಿಳಿಸಿವೆ.
ಎನ್ ಕೌಂಟರ್ ವೇಳೆ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಘಟನೆಯಲ್ಲಿ ಓರ್ವ ಯೋಧ ಹಾಗೂ ಓರ್ವ ಪೊಲೀಸ್ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ನಾಲ್ವರು ಉಗ್ರರಲ್ಲಿ ಲಷ್ಕರ್-ಇಲ-ತೊಯ್ಬಾ ಉಗ್ರ ಸಂಘಟನೆಯ ಸ್ಥಳೀಯ ಕಮಾಂಡರ್ ನನ್ನು ಹತ್ಯೆ ಮಾಡುವುದರಲ್ಲಿ ಭಾರತೀಯ ಸೇನಾಪಡೆ ಯಶಸ್ವಿಯಾಗಿದೆ.
ಎ++ ಕೆಟಗರಿಯ ಉಗ್ರ ಷೌಕತ್ ಅಹ್ಮದ್ ತಕ್ ನನ್ನು ಹತ್ಯೆ ಮಾಡುವ ಮೂಲಕ ಸೇನಾಪಡೆ ಮೇಲುಗೈ ಸಾಧಿಸಿದೆ. ಕಳೆದ 8 ವರ್ಷಗಳಿಂಗ ಅಹ್ಮದ್ ತಕ್ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಲಷ್ಕರ್ ಇ ತೊಯ್ಬಾ ಕಮಾಂಡರ್ ಗಳಾದ ಅಬು ದುಜಾನ, ಖ್ವಾಸಿಂ ಹಾಗೂ ಅಬು ರೆಹಮಾನ್ ಜೊತೆ ಅಹ್ಮದ್ ತಕ್ ನಿಕಟ ಸಂಪರ್ಕವನ್ನು ಹೊಂದಿದ್ದನೆಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics