ದೇಶ

ಜಮ್ಮು-ಕಾಶ್ಮೀರದಲ್ಲಿ ಸೇನೆ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ ಪ್ರತ್ಯೇಕತಾವಾದಿಗಳು

Srinivas Rao BV
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ  ಐವರನ್ನು ಹತ್ಯೆ ಮಾಡಿರುವುದನ್ನು ವಿರೋಧಿಸಿ ಪ್ರತ್ಯೇಕತಾವಾದಿಗಳು ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದಾರೆ. 
ಜಾಯಿಂಟ್ ರೆಸಿಸ್ಟೆನ್ಸ್ ಲೀಡರ್ಶಿಪ್( ಜೆಆರ್ ಎಲ್)ಯ ನಾಯಕ ಸಯೀದ್ ಅಲಿ ಗಿಲಾನಿ, ಮಿರ್ವಾಜಾ ಉಮರ್ ಫಾರೂಕ್,  ಮೊಹಮ್ಮದ್ ಯಾಸೀನ್ ಮಲೀಕ್  ಮೆ.07 ರಂದು  ಪ್ರತಿಭಟನೆಗೆ ಕರೆ ನೀಡಿದ್ದಾರೆ. 
ಭಾರತೀಯ ಸೇನೆಯಿಂದ ಹತ್ಯೆಗೀಡಾಗುತ್ತಿರುವ ನಾಗರಿಕರ ಸಂಖ್ಯೆ ಏರಿಕೆಯಾಗುತ್ತಿದೆ. ನಮ್ಮ ನೋವನ್ನು ಹೇಳಲು ಪದಗಳು ಸಿಗುತ್ತಿಲ್ಲ ಎಂದು ಮಿರ್ವಾಜಾ ಉಮರ್ ಫಾರೂಕ್ ಟ್ವೀಟ್ ಮಾಡಿದ್ದಾರೆ. ಪ್ರತಿಭಟನಾ ಮೆರವಣಿಗೆ ಮೂಲಕ ನಾಗರಿಕ ಸಚಿವಾಲಯವನ್ನು ತಲುಪಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಮಿರ್ವಾಜಾ ಉಮರ್ ಫಾರೂಕ್ ಹೇಳಿದ್ದಾರೆ. 
ಮೇ.06 ರಂದು ಭದ್ರತಾ ಸಿಬ್ಬಂದಿಗಳು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಸದ್ದಾಮ್ ಪದ್ದಾರ್ ನ್ನು ಹತ್ಯೆ ಮಾಡಿತ್ತು. ಈ ಗುಂಡಿನ ದಾಳಿಯಲ್ಲಿ ಕಾಶ್ಮೀರ್ ವಿವಿಯ ಸಹಾಯಕ ಪ್ರಾಧ್ಯಾಪಕ ಮೊಹಮ್ಮದ್ ರಫೀ ಭಟ್ ಸೇರಿದಂತೆ ಒಟ್ಟು ಐವರು ನಾಗರಿಕರು ಕೂಡಾ ಮೃತಪಟ್ಟಿದ್ದರು. 
SCROLL FOR NEXT