ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮಾಜಿ ಸಿಎಂಗಳಿಗೆ ಸರ್ಕಾರಿ ಬಂಗಲೆ ಇಲ್ಲ: ಸುಪ್ರೀಂ ಕೋರ್ಟ್

ಮಾಜಿ ಸಿಎಂಗಳಿಗೆ ಸರ್ಕಾರಿ ಸವಲತ್ತು ನೀಡುವ ಉತ್ತರ ಪ್ರದೇಶ ಸಿಎಂ ಯೋಗಿ ಸರ್ಕಾರದ ತಿದ್ದುಪಡಿ ವಿಧೇಯಕಕ್ಕೆ ಹಿನ್ನಡೆಯಾಗಿದ್ದು, ಮಾಜಿ ಸಿಎಂಗಳಿಗೆ ಸರ್ಕಾರಿ ಬಂಗಲೆ ನೀಡಬಾರದು ಎಂಬ ಆದೇಶವನ್ನು ಎತ್ತಿ ಹಿಡಿದಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 7 May 2018, 1:09 am
ನವದೆಹಲಿ: ಮಾಜಿ ಸಿಎಂಗಳಿಗೆ ಸರ್ಕಾರಿ ಸವಲತ್ತು ನೀಡುವ ಉತ್ತರ ಪ್ರದೇಶ ಸಿಎಂ ಯೋಗಿ ಸರ್ಕಾರದ ತಿದ್ದುಪಡಿ ವಿಧೇಯಕಕ್ಕೆ ಹಿನ್ನಡೆಯಾಗಿದ್ದು, ಮಾಜಿ ಸಿಎಂಗಳಿಗೆ ಸರ್ಕಾರಿ ಬಂಗಲೆ ನೀಡಬಾರದು ಎಂಬ ಆದೇಶವನ್ನು ಎತ್ತಿ ಹಿಡಿದಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಂಜನ್ ಗಗೋಯ್, ಉತ್ತರ ಪ್ರದೇಶ ಸರ್ಕಾರದ ತಿದ್ದುಪಡಿ,  ನಿರಂಕುಶ, ತಾರತಮ್ಯ ಪೂರಿತವಾಗಿದ್ದು, ಸಂವಿಧಾನದ ಸಮಾನತೆಯ ಪರಿಕಲ್ಪನೆಗೆ ವಿರುದ್ಧವಾದದ್ದಾಗಿದೆ ಎಂದು ಕಿಡಿಕಾರಿದೆ.
ಜನಪ್ರತಿನಿಧಿ ಹುದ್ದೆಯಿಂದ ಕೆಳಗಿಳಿದ ಮೇಲೆ ಅವರೂ ಕೂಡ ಸಾಮಾನ್ಯರೇ. ಅವರೂ ಮತ್ತು ಸಾಮಾನ್ಯರ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್  ಹೇಳಿದೆ. 

Advertisement

Advertisement

ಎನ್ ಜಿಒ ಸಂಸ್ಥೆಯೊಂದು ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕಳೆದ ಏಪ್ರಿಲ್ 19ರ ವಿಚಾರಣೆ ವೇಳೆ ಆದೇಶವನ್ನು ಮುಂದೂಡಿತ್ತು. ಲೋಕ್ ಪ್ರಹಾರಿ ಸಂಸ್ಥೆ ಮಾಜಿ ಸಿಎಂಗಳಿಗೂ ಸರ್ಕಾರ ಸವಲತ್ತು ನೀಡುವ ಸಿಎಂ ಯೋಗಿ ಸರ್ಕಾರದ ಮಂತ್ರಿಗಳು (ವೇತನಗಳು, ಭತ್ಯೆಗಳು ಮತ್ತು ವಿವಿಧ ನಿಬಂಧನೆಗಳು) ಕಾಯಿದೆ, 1981ರ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿತ್ತು. 
2016ರಲ್ಲಿಯೇ ಆದೇಶ ನೀಡಿದ್ದ ಸುಪ್ರೀಂ
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ 2016ರಲ್ಲಿಯೇ ಸುಪ್ರೀಂ ಕೋರ್ಟ್ ತನ್ನ ಆದೇಶ ನೀಡಿತ್ತು. ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆಗಳಲ್ಲಿನ ತಮ್ಮ ವಾಸ್ತವ್ಯವನ್ನು ಜೀವನ ಪರ್ಯಂತ ಮುಂದುವರಿಸುವಂತಿಲ್ಲ ಎಂದು ಅಂದು ತನ್ನ ಆದೇಶ ಹೇಳಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement