ನವದೆಹಲಿ: 2008 ರಲ್ಲಿ ಸ್ಪಷ್ಟ ಬಹುಮತವಿದ್ದರೂ ಬಿಜೆಪಿ 5 ವರ್ಷಗಳ ಅವಧಿಯಲ್ಲಿ ಮೂರು ಸಿಎಂಗಳನ್ನು ನೀಡಿದ್ದನ್ನ ಕರ್ನಾಟಕ ಮತದಾರರು ಮರೆಯಬಾರದು ಎಂದು ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು,ಕರ್ನಾಟಕ ಮತದಾರರು ಐದು ವರ್ಷಗಳ ಕಾಂಗ್ರೆಸ್ ನ ಸ್ಥಿರ ಆಡಳಿತ ಮತ್ತು 5 ವರ್ಷದಲ್ಲಿ ಮೂರು ಸಿಎಂಗಳನ್ನು ಕೊಟ್ಟ ಕೇಸರಿ ಪಕ್ಷದ ಆಡಳಿತವನ್ನು ಜನರು ಹೋಲಿಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
2008 ರಲ್ಲಿ ಕರ್ನಾಟಕ ಜನತೆ ಬಿಜೆಪಿ ಬಹುಮತ ನೀಡಿದ್ದರು 110 ಸೀಟು ಪಡೆದಿದ್ದರು. ಪೂರ್ಣ ಪ್ರಮಾಣದ ಬಹುಮತ ಪಡೆದು ಸರ್ಕಾರ ರಚಿಸಿದ್ದ ಬಿಜೆಪಿ ಸ್ಥಿರ ಆಡಳಿತ ನೀಡಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಬಿಎಸ್ ಯಡಿಯೂರಪ್ಪ, ಡಿ.ವಿ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದರು.