ದೇಶ

'ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಜಾಗವಿಲ್ಲ, ಹಿಂಸಾಚಾರ ವಿರೋಧಿಸಿ': ಯುವ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ

Srinivasamurthy VN
ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಜಾಗವಿಲ್ಲ, ಹಿಂಸಾಚಾರಕ್ಕೆ ವಿರೋಧವಿರಲಿ ಎಂದು ಬಿಜೆಪಿ ಯುವ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಇಂದು ನಮೋ ಆ್ಯಪ್ ನ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಸಂವಾದ ನಡೆಸಿದ ಪ್ರಧಾನಿ ಮೋದಿ, 'ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಸ್ಥಳವಿಲ್ಲ. ಸತ್ಯವನ್ನು ಸ್ವೀಕರಿಸುವ ಸಾಮರ್ಥ್ಯ ಇಲ್ಲದವರು ಹಾಗೂ ತನ್ನ ಮೇಲಿನ ನಂಬಿಕೆ ಕಳೆದುಕೊಂಡ ವ್ಯಕ್ತಿಯು ರಾಜಕೀಯ ಹಿಂಸಾಚಾರದ ಮಾರ್ಗ ಅನುಸರಿಸುತ್ತಾನೆ ಎಂದು ಹೇಳಿದರು.
ಇದೇ ವೇಳೆ 1984ರ ಇಂದಿರಾ ಹತ್ಯೆ ಬಳಿಕ ದೇಶದಲ್ಲಿ ನಡೆದ ಹಿಂಸಾಚಾರ ಕುರಿತು ಮಾತನಾಡಿದ ಮೋದಿ, 'ಇಂದಿರಾ ಗಾಂಧಿ ಹತ್ಯೆ ಬಳಿಕ 1984ರಲ್ಲಿ ಹಿಂಸಾಚಾರ ನಡೆದಿತ್ತು. ಅಲ್ಲಿಂದ ಮುಂದೆ ಹಿಂಸಾಚಾರ ರಾಜಕೀಯ ವ್ಯವಸ್ಥೆಯ ಭಾಗವಾಗಿರುವಂತೆ ತೋರುತ್ತಿದೆ. ಕರ್ನಾಟಕ, ಕೇರಳ ಹಾಗೂ ತ್ರಿಪುರಾದಲ್ಲಿ ನಮ್ಮ ಕಾರ್ಯಕರ್ತರ ಕೊಲೆಯಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ತಕ್ಕದಾದುದಲ್ಲ. ಹಿಂಸಾಚಾರಕ್ಕೆ ವಿರೋಧವಿರಲಿ’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕರ್ನಾಟಕದಲ್ಲಿ ವಿಶ್ವದರ್ಜೆಯ ಐದು ಕ್ರೀಡಾ ಕೇಂದ್ರ ಸ್ಥಾಪನೆ
ಇದೇ ವೇಳೆ ಕರ್ನಾಚಕ ರಾಜ್ಯದಲ್ಲಿ ಬಿಜೆಪಿ ಆಡಳಿತ ಬಂದರೆ, ನಮ್ಮ 60 ಬಿಪಿಒ ಕಾಂಪ್ಲೆಕ್ಸ್‌ಗಳನ್ನು ಸ್ಥಾಪಿಸಲಾಗುತ್ತದೆ. ಬಿಪಿಒ ಸ್ಥಾಪನೆಗೆ ಸ್ಥಳೀಯ ಉದ್ಯಮಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ₹250 ಕೋಟಿ ಮೀಸಲಿಡಲಾಗುತ್ತದೆ ಎಂದು ಭರವಸೆ ನೀಡಿದರು.
ಅಂತೆಯೇ  ರಾಜ್ಯದ ಯುವಕರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ತೋರಿದ್ದಾರೆ. 20–25 ವರ್ಷಗಳಿಂದ ಪ್ರಾಥಮಿಕ ಹಂತದಿಂದಲೂ ಕಾರ್ಯಕರ್ತರು ಜನರಿಗಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕದಲ್ಲಿ ವಿಶ್ವದರ್ಜೆಯ ಐದು ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ) ಅತ್ಯಧಿಕ ಮಟ್ಟ ಮುಟ್ಟಿದ್ದು, ಏರುಗತಿಯಲ್ಲಿ ಮುಂದುವರಿದಿದೆ ಎಂದು ಹೇಳಿದರು.
SCROLL FOR NEXT