ನವದೆಹಲಿ: ಭಾರತೀಯ ಸೇನಾ ಕಾರ್ಯಾಚರಣೆ ವೇಳೆ ಬಂಧನಕ್ಕೊಳಗಾಗಿದ್ದ ಪಾಕಿಸ್ತಾನದ ಉಗ್ರ ಝಬಿಲ್ಲಾ ಅಲಿಯಾಸ್ ಹಮ್ಜಾನನ್ನು 10 ದಿನಗಳ ವರೆಗೆ ಎನ್ಐಎ ವಶಕ್ಕೆ ನೀಡಲಾಗಿದೆ.
ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವಿನ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ ಮುಲ್ತಾನ್ ಮೂಲದ ಝಬಿಲ್ಲಾ ಅಲಿಯಾಸ್ ಹಮ್ಜಾ ತಪ್ಪಿಸಿಕೊಂಡಿದ್ದ. ಮಾ.20 ರಂದು ನಡೆದ ಶೋಧ ಕಾರ್ಯಾಚರಣೆಯಲ್ಲಿ ಈ ಉಗ್ರನನ್ನು ಬಂಧಿಸಲಾಗಿತ್ತು. ಅದೇ ದಿನದಂದು ನಡೆದ ಗುಂಡಿನ ಕಾಳಗದಲ್ಲಿ 5 ಭಯೋತ್ಪಾದಕರು ಹತ್ಯೆಯಾಗಿದ್ದರು ಹಾಗೂ ಮೂವರು ಸೇನಾ ಸಿಬ್ಬಂದಿಗಳು, ಇಬ್ಬರು ಪೊಲೀಸ್ ಸಿಬ್ಬಂದಿಗಳು ಹುತಾತ್ಮರಾಗಿದ್ದರು.
ಜಮ್ಮು-ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿದ್ದರೂ ನಂತರ ಪ್ರಕರಣದ ತನಿಖೆಯನ್ನು ಎನ್ಐಎ ಗೆ ವಹಿಸಲಾಗಿತ್ತು.