ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ಕಾಂಗ್ರೆಸ್ ಮೊಂಡುತನದಿಂದ ಒಬಿಸಿ ಆಯೋಗ ಮಸೂದೆಗೆ ಅಂಗೀಕಾರ ಸಿಕ್ಕಿಲ್ಲ: ಪ್ರಧಾನಿ ಮೋದಿ

ಕಾಂಗ್ರೆಸ್ ಮೊಂಡುತನದಿಂದಾಗಿ ಹಿಂದುಳಿ ವರ್ಗ (ಒಬಿಸಿ ಕಮಿಷನ್) ಸಾಂವಿಧಾನಿಕ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಮಸೂದೆ ಇನ್ನೂ ಅಂಗೀಕಾರ ಪಡೆದುಕೊಂಡಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ...

ನವದೆಹಲಿ: ಕಾಂಗ್ರೆಸ್ ಮೊಂಡುತನದಿಂದಾಗಿ ಹಿಂದುಳಿ ವರ್ಗ (ಒಬಿಸಿ ಕಮಿಷನ್) ಸಾಂವಿಧಾನಿಕ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಮಸೂದೆ ಇನ್ನೂ ಅಂಗೀಕಾರ ಪಡೆದುಕೊಂಡಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ. 
ನಮೋ ಆ್ಯಪ್ ಮೂಲಕ ಕರ್ನಾಟಕದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಕೊಳಗೇರಿ ಮೋರ್ಚಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಮೋದಿಯವರು, ದಲಿತ ಬಂಧುಗಳಲ್ಲಿ ವನಂತಿ ಮಾಡಿಕೊಳ್ಳುತ್ತಿದ್ದೇನೆ. ಕಾಂಗ್ರೆಸ್ ಸುಳ್ಳು ಮಾತುಗಳನ್ನು ನಂಬಬೇಡಿ. ದಲಿತಪರ ಕಾರ್ಯಗಳಿಗೆ ಬಿಜೆಪಿ ನೀಡಿರುವಷ್ಟು ಕೊಡುಗೆಗಳನ್ನು ಇನ್ನಾವುದೇ ಪಕ್ಷವೂ ನೀಡಿಲ್ಲ ಎಂದು ಬಿಜೆಪಿ ಸಾಧನೆಯನ್ನು ನೆನಪಿಸಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್'ಗೂ ಮೊದಲು ಮಹಾತ್ಮ ಬಾಫುಲೆ ಜಾತಿ ತಾರತಮ್ಯದ ವಿರುದ್ಧ ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಟ ಮಾಡಿದ್ದರು. ಮಹಾತ್ಮ ಬಾಫುಲೆ ನಮ್ಮ ಪಕ್ಷಕ್ಕೆ ಸ್ಫೂರ್ತಿದಾಯಕವಾಗಿದ್ದರು. ಸಂತ ರಹೀಂದಾಸ್ ಕೂಡ ಜಾತಿ, ಭೇದ ಭಾವ ಪದ್ಧತಿ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. 

ಅಂಬೇಡ್ಕರ್ ಅವರಿಗೂ ಕೂಡ ಕಾಂಗ್ರೆಸ್ ಸಾಕಷ್ಟು ಬಾರಿ ಅಪಮಾನ ಮಾಡಿದೆ. ಅವರನ್ನು ಸೋಲಿಸಿ ಅವಮಾನ ಮಾಡಿತ್ತು. ಅಲ್ಲದೆ, ಭಾರತ ರತ್ನ ಪ್ರಶಸ್ತಿ ನೀಡಲು ಕೂಡ ಮನಸ್ಸು ಮಾಡಿರಲಿಲ್ಲ. ಆ ಮಹಾನ್ ಚೇತನಕ್ಕೆ ಭಾರತ ರತ್ನ ಪ್ರಶಸ್ತಿ ನೀಡಿದ್ದು, ಬಿಜೆಪಿಯೇ ಎನ್ನುವುದು ಮೆಚ್ಚುವಂತಹದ್ದು. ಬಿಜೆಪಿ ಎಲ್ಲಾ ವರ್ಗದ ಅಭಿವೃದ್ಧಿಗೆ ಬದ್ಧವಾಗಿದ್ದು, ಶಿಕ್ಷಣ ದಿಂದಲೇ ಶೋಷಿತ ವರ್ಗದ ಅಭಿವೃದ್ಧಿ ಸಾಧ್ಯ ಎಂದು ಹೇಳಿದ್ದಾರೆ. 

ದಲಿತ ಮತ್ತು ಹಿಂದುಳಿದ ವರ್ಗದ ಅತೀ ಹೆಚ್ಚು ಸಂಸದರನ್ನು ಗೆಲ್ಲುವಂತೆ ಮಾಡಿದ ಬಿಜೆಪಿ, ಅವರನ್ನು ಲೋಕಸಭೆಗೆ ಕಳುಹಿಸಿದೆ. ಅಂಬೇಡ್ಕರ್ ಅವರ ವಿಚಾರಗಳು, ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಗಳನ್ನು ಬಿಜೆಪಿ ಅತೀ ಹೆಚ್ಚು ಆಸಕ್ತಿಯಿಂದ ಕೈಗೊಳ್ಳುತ್ತಿದೆ. ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದಂತೆ 5 ಪ್ರಮುಖ ಸ್ಥಳಗಳನ್ನು ಪಂಚ ತೀರ್ಥ ಕ್ಷೇತ್ರಗಳಾಗಿ ಅಭಿವೃದ್ಧಿ ಪಡಿಸಿ ಆ ಮಹಾನ್ ಚೇತನಕ್ಕೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ. 

ಅಂಬೇಡರ್ ಅವರ ಬಹಳ ಹಿಂದೆಯೇ ಭವಿಷ್ಯವನ್ನು ನುಡಿದಿದ್ದರು. ಬಹಳಷ್ಟು ಅಡೆತಡೆಗಳಿದ್ದರೂ ಕೂಡ ನನ್ನ ಭಾರತ ಜಗತ್ತಿನಲ್ಲಿಯೇ ಅತ್ಯುನ್ನತ ಸ್ಥಾನಕ್ಕೇರುವುದು ನಿಶ್ಚಿತ ಎಂದು ಹೇಳಿದ್ದರು. ಅದು ಇದೀಗ ಸಾಕಾರಗೊಳ್ಳುತ್ತಿದೆ. 

ಜನಧನ್ ಕಾರ್ಯಕ್ರಮದ ಮೂಲಕ 31 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ 7 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ದಲಿತರನ್ನೊಳಗೊಂಡ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಗುರಿಯಾಗಿದೆ. ಡಾ.ಅಂಬೇಡ್ರ್ ಅವರ ಬದುಕಿನ ಜೊತೆ ಸಂಬಂಧ ಹೊಂದಿರುವ ಸ್ಥಳಗಳಾದ ಮೌವ್, ನಾಗಪುರ, 26 ಆಲಿಪುರ ರಸ್ತೆ (ದೆಹಲಿ), ದಾದರ್ ಮತ್ತು ಲಂಡನ್ ಮುಂತಾದೆಡೆ ಭೇಟಿ ನೀಡಲು ಅಂಬೇಡ್ಕರ್ ತೀರ್ಥ ಸ್ಥಳ ಯಾತ್ರೆ, ನಿಧಿಗೆ ಹಣ ಮೀಸಲಿಡಲಾಗುವುದು. ಪ್ರಸ್ತುತ ಇರುವ ಎಲ್ಲಾ ಎಸ್'ಸಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹೆಚ್ಚಿಸಲು 600 ಎಸ್'ಸಿ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗಲು ರೂ.3 ಸಾವಿರ ಕೋಟಿ ಮೊತ್ತದ ಜಗಜೀವನ ರಾಮ್ ವಿದ್ಯಾರ್ಥಿ ವೇತನ ಯೋಜನೆ ಸ್ಥಾಪಿಸಲಿದ್ದೇವೆಂದು ತಿಳಿಸಿದ್ದಾರೆ. 

ಹಿಂದುಳಿದ ವರ್ಗಗಳ ಕಲ್ಯಾಣದ ಬಗ್ಗೆ ಕಾಂಗ್ರೆಸ್ ಸ್ವಲ್ಪವೂ ಕಾಳಜಿ ಇಲ್ಲ. ಲೋಕಸಭೆಯಲ್ಲಿ ನಾನು ಒಬಿಸಿ ಮಸೂದೆ'ಯನ್ನು ಪಾಸ್ ಮಾಡಿದ್ದಾರೆ, ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಮೊಂಡುತನದಿಂದ ವಿರೋಧ ವ್ಯಕ್ತವಾಯಿತು. ಇದರಿಂದಲೇ ಸ್ಪಷ್ಟವಾಗುತ್ತದೆ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ವಿರೋಧಿಯೆಂದು. ದಲಿತರನ್ನು ಅಪಮಾನಪಡಿಸುವ ಯಾವುದೇ ಕೃತ್ಯವನ್ನು ಬಿಜೆಪಿ ಬೆಂಬಲಿಸುವುದಿಲ್ಲ, ಸಮರ್ಥಿಸುವುದೂ ಇಲ್ಲ. ಆ ಸಮಾಜಕ್ಕೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಹಾಗೂ ದಲಿತರನ್ನು ಉನ್ನತಿಯತ್ತ ಕೊಂಡೊಯ್ಯುವ ಕೆಲಸಗಳಿಗೆ ಬಿಜೆಪಿ ತನ್ನನ್ನು ಸಮರ್ಪಿಸಿಕೊಂಡಿದೆ. ನಮ್ಮ ಸರ್ಕಾರ ದೇಶದ 4 ಕೋಟಿ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಒದಗಿಸಿ, ಬಡ ಕುಟುಂಬಗಳ ಪರ ನಮ್ಮ ಬದ್ಧತೆಯನ್ನು ಪೂರ್ಣಗೊಳಿಸಿದ್ದೇವೆಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಪ್ತ ಗುಂಪಿನಿಂದ ಸ್ಪೋಟಕ ಸಂದೇಶ, ಡಾ. ಜಿ. ಪರಮೇಶ್ವರ್ ಹೇಳಿದ್ದೇನು?

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

SCROLL FOR NEXT