ನವದೆಹಲಿ: ಪಶ್ಚಿಮ ಬಂಗಾಳ ಪಂಚಾಯತಿ ಚುನಾವಣೆ ಸ್ಪರ್ಧಿಸುವದಕ್ಕೆ ಈ-ಮೇಲ್ ಮೂಲಕ ಸಲ್ಲಿಸಿದ ನಾಮಪತ್ರಗಳ ಸ್ವೀಕೃತಿ ಕುರಿತಂತೆ ಕಲ್ಕತ್ತಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನಿಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಪೀಠವು ರಾಜ್ಯದ ಸುಮಾರು 17,000 ಅಭ್ಯರ್ಥಿಗಳು ಸ್ಪರ್ಧಿಸಿದ ಚುನಾವ್ಣೆ ಫಲಿತಾಂಶ ಪ್ರಕಟಿಸಲು ತಡೆ ಹಾಕಿದೆ. ಅಲ್ಲದೆ ಮೇ 14ರಂದು ರಾಜ್ಯದಲ್ಲಿ "ಮುಕ್ತ ಮತ್ತು ನ್ಯಾಯಯುತ" ಚುನಾವಣೆ ನಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕೇಳಿದೆ.
ಒಟ್ಟಾರೆ 34 ಪ್ರತಿಶತ ಅಭ್ಯರ್ಥಿಗಳು ಚುನಾವಣೆಯಲ್ಲಿ ಅವಿರೋಧವಾಗಿ ಗೆದ್ದಿದ್ದಾರೆ ಎನ್ನುವುದು ಆತಂಕಕಾರಿ ವಿಚಾರವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಏಪ್ರಿಲ್ 23 ಮಧ್ಯಾಹ್ನ 3 ಗಂಟೆಗೆ ಮುನ್ನ ಸಿಪಿಐ (ಎಂ) ಪಕ್ಷದ ಅಭ್ಯರ್ಥಿಗಳು ಈ-ಮೇಲ್ ಮುಖೇನ ಸಲ್ಲಿಸಿದ್ದ ನಾಮಪತ್ರವನ್ನು ಮಾನ್ಯ ಮಾಡುವಂತೆ ಕಲ್ಕತ್ತಾ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಮೇ 8ರಂದು ನಿರ್ದೇಶಿಸಿತ್ತು.