ಹಿಮಾಂಶು ರಾಯ್ 
ದೇಶ

ಕ್ಯಾನ್ಸರ್ ನಿಂದಾಗಿಯೇ ಹಿಮಾಂಶು ರಾಯ್ ಆತ್ಮಹತ್ಯೆ- ಪೊಲೀಸ್ ವರದಿಯಲ್ಲಿ ಹೇಳಿಕೆ

ಹಿಮಾಂಶು ರಾವ್ ಹಲವು ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇದೇ ಅವರ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರ ವರದಿಯಲ್ಲಿ ಹೇಳಲಾಗಿದೆ.

ಮುಂಬೈ : ಮುಂಬೈಯಲ್ಲಿ ಬೆಳಿಗ್ಗೆ ತಮ್ಮ ಸರ್ವಿಸ್ ರಿವಾಲ್ವರ್ ನಿಂದಲೇ ಆತ್ಮಹತ್ಯೆಗೆ ಶರಣಾದ  ಉಗ್ರ ನಿಗ್ರಹದ ದಳದ ಮಾಜಿ ಮುಖ್ಯಸ್ಥ ಹಿಮಾಂಶು ರಾವ್  ಹಲವು ದಿನಗಳಿಂದ ಕ್ಯಾನ್ಸರ್ ನಿಂದ  ಬಳಲುತ್ತಿದ್ದರು. ಇದೇ ಅವರ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರ ವರದಿಯಲ್ಲಿ  ಹೇಳಲಾಗಿದೆ.

 ಹಿಮಾಂಶುರಾವ್ ಅವರ ಮನೆಯಲ್ಲಿ ಸಿಕ್ಕ ಸೂಸೈಡ್ ನೋಟ್ ನಲ್ಲಿಯೂ ಅದನ್ನೇ ಉಲ್ಲೇಖಿಸಲಾಗಿದೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹಿಮಾಂಶು ರಾಯ್ ಮಾನಸಿಕ ಖಿನ್ನತೆಗೊಳಗಾಗಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 ಇಂದು ಮಧ್ಯಾಹ್ನ 12-40 ರ ಸುಮಾರಿನಲ್ಲಿ ಮಹಾರಾಷ್ಟ್ರದ ಮಾಜಿ ಸಹಾಯಕ ಪೊಲೀಸ್ ಮಹಾನಿರ್ದೇಶಕ  ಹಿಮಾಂಶು ರಾವ್ ಅವರ ಮನೆಯಲ್ಲಿ ಖಾಸಗಿ ಪರವಾನಗಿ ಹೊಂದಿದ್ದ ಬಂದೂಕಿನಿದ ಒಂದು ಸುತ್ತಿನ  ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದರು.

 ಹಿಮಾಂಶು ರಾಯ್ ಕಳೆದೆರಡು ವರ್ಷಗಳಿಂದಲೂ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇದಕ್ಕಾಗಿ ವೈದ್ಯಕೀಯ ರಜೆ ಪಡೆದು  ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಕಾಯಿಲೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅದಕ್ಕಾಗಿ  ಸಾಯುವುದೆ ಲೇಸೆಂದು ನಿರ್ಧರಿಸಿ ಸೂಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕ್ಯಾನ್ಸರ್ ನಿಂದಾಗಿ ಹಿಮಾಂಶು ರಾವ್  ಗಣನೀಯ ಪ್ರಮಾಣದಲ್ಲಿ ತೂಕ ಕಳೆದುಕೊಂಡಿದ್ದರು.  ಮೊದಲ ರೀತಿಯಲ್ಲಿ ದೈಹಿಕ ಸದೃಢತೆ  ಹೊಂದಲು ಸಾಧ್ಯವಿರಲಿಲ್ಲ. ಅವರು ಸಾವನ್ನಪ್ಪಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು  ಬಾಂಬೆ ಆಸ್ಪತ್ರೆಯ  ವೈದ್ಯ ಡಾ. ಗೌತಮ್ ಬನ್ಸಾಲಿ ಹೇಳಿದ್ದಾರೆ.

1988ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ಹಿಮಾಂಶು ರಾಯ್ 2016ರಲ್ಲಿ  ಮುಂಬೈಯ ಜಂಟಿ ಆಯುಕ್ತರಾಗಿ  ಕಾರ್ಯನಿರ್ವಹಿಸಿದ್ದರು.  ಸಹಾಯಕ ಪೊಲೀಸ್ ಮಹಾನಿರ್ದೇಶಕರಾಗಿಯೂ  ಅವರು ಸೇವೆ ಸಲ್ಲಿಸಿದ್ದರು.

ಹಿಮಾಂಶು ರಾಯ್ ಅವರ ಸಾವಿಗೆ  ಬಾಲಿವುಡ್ ನಟರಾದ ಮನೋಜ್ ಭಾಜಪೈ, ರಿತೇಶ್ ದೇಶ್ ಮುಖ್ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

 



 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel