ಅಜ್ಮೀರ್: ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರನಾಥ ತಿಲಕ್ ಭಯೋತ್ಪಾದನೆಯ ಜನಕ ಎಂದು ರಾಜಸ್ಥಾನದ 8 ನೇ ತರಗತಿ ಪಠ್ಯದಲ್ಲಿ ಬರೆಯಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.
8 ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯದ 22 ನೇ ಅಧ್ಯಾಯದ 18 ಹಾಗೂ 19 ನೇ ಶತಮಾನದಲ್ಲಿ ನಡೆದ ರಾಷ್ಟ್ರೀಯ ಚಳಿವಳಿಯ ಘಟನೆಗಳೆಂಬ ವಿಷಯದಲ್ಲಿ ಬಾಲಗಂಗಾಧರನಾಥ ತಿಲಕ್ ಅವರನ್ನು ಭಯೋತ್ಪಾದನೆಯ ಜನಕ ಎಂದು ಉಲ್ಲೇಖಿಸಲಾಗಿದೆ.
ಬಾಲಗಂಗಾಧರನಾಥ ತಿಲಕ್ ಅವರು ರಾಷ್ಟ್ರೀಯ ಚಳುವಳಿಗೆ ಮಾರ್ಗದರ್ಶನ ನೀಡಿದವರು ಹಾಗಾಗಿ ಅವರನ್ನು ಭಯೋತ್ಪಾದನೆಯ ಜನಕ ಎಂದು ಕರೆಯಲಾಗುತ್ತದೆ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
ಮಥುರಾ ಮೂಲದ ಪ್ರಿಂಟರ್ ನಿಂದ ಪುಸ್ತಕ ಮುದ್ರಣಗೊಂಡಿದ್ದು, ಆಂಗ್ಲ ಮಾಧ್ಯಮಿಕ ಶಾಲೆಗಳಲ್ಲಿ ಈ ಪುಸ್ತಕವನ್ನು ಬೋಧಿಸಲು ಬಳಕೆ ಮಾಡಲಾಗುತ್ತಿದೆ. ತಿಲಕರು ದೇಶದಲ್ಲಿ ವಿನೂತನವಾದ ಜಾಗೃತಿ ಮೂಡಿಸಿದರು. ಜನಸಾಮಾನ್ಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು, ಇದು ಬ್ರಿಟೀಷರ ಕೆಂಗಣ್ಣಿಗೆ ಗುರಿಯಾಯಿತು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos